alex Certify
ಕನ್ನಡ ದುನಿಯಾ       Mobile App
       

Kannada Duniya

ವಿರಾಟ್ ಕೊಹ್ಲಿ ಬ್ಯಾಟ್ ಬೆಲೆ 8 ಕೋಟಿ ರೂ..!

kohli bat

ನವದೆಹಲಿ: ಭಾರತ ಕ್ರಿಕೆಟ್ ತಂಡದ ಸ್ಪೋಟಕ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ, ಭರ್ಜರಿ ಫಾರ್ಮ್ ನಲ್ಲಿದ್ದಾರೆ. ಕೊಹ್ಲಿ ಕಮಾಲ್ ಬ್ಯಾಟಿಂಗ್ ನಲ್ಲಿ ಮಾತ್ರವಲ್ಲ, ಸಂಭಾವನೆ ವಿಚಾರದಲ್ಲೂ ಮುಂದುವರೆದಿದೆ. ಕೊಹ್ಲಿ ಈಗಾಗಲೇ ಐಪಿಎಲ್ ನಲ್ಲಿ ಟೀಂ ಇಂಡಿಯಾ ನಾಯಕ ಮಹೇಂದ್ರ ಸಿಂಗ್ ಧೋನಿಗಿಂತ ಹೆಚ್ಚು ಸಂಭಾವನೆ ಪಡೆಯುತ್ತಾರೆ.

ಐಪಿಎಲ್ ನಲ್ಲಿ ಧೋನಿಗಿಂತ ಹೆಚ್ಚು ಸಂಭಾವನೆ ಪಡೆದ ಕೊಹ್ಲಿ, ಇದೀಗ ಜಾಹಿರಾತಿನಲ್ಲೂ ಧೋನಿಯನ್ನು ಹಿಂದಿಕ್ಕಿದ್ದಾರೆ. ವಿರಾಟ್ ಕೊಹ್ಲಿ ಬಳಸುವ ಬ್ಯಾಟ್ ಬೆಲೆ ಬರೋಬ್ಬರಿ 8 ಕೋಟಿ ರೂ. ಇದರ ಮೇಲೆ ಕೊಹ್ಲಿ ಬಳಸುವ ಎಂ.ಆರ್.ಎಫ್. ಲೋಗೋ ಕೊಹ್ಲಿಗೆ ಇಷ್ಟು ದೊಡ್ಡ ಮೊತ್ತದ ಸಂಭಾವನೆ ತಂದುಕೊಟ್ಟಿದೆ. ಧೋನಿ ಬ್ಯಾಟ್ ಮೇಲೆ ಸ್ಟಾರ್ಟಸ್ ಕಂಪನಿಯ ಜಾಹೀರಾತು ಕಾಣಿಸಿಕೊಳ್ಳುತ್ತಿದ್ದು, ಇದಕ್ಕಾಗಿ ಅವರು 6 ಕೋಟಿ ರೂಪಾಯಿ ಸಂಭಾವನೆ ಪಡೆದುಕೊಳ್ಳುತ್ತಾರೆ.

ಯುವರಾಜ್ ಸಿಂಗ್ 4 ಕೋಟಿ ರೂ., ಶಿಖರ್ ಧವನ್ 3 ಕೋಟಿ ರೂ., ರೋಹಿತ್ ಶರ್ಮ ಹಾಗೂ ಸುರೇಶ್ ರೈನಾ 2.5 ರಿಂದ 3 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ. ಐಪಿಎಲ್ ನಲ್ಲಿ ಧೋನಿ 12.5 ಕೋಟಿ ರೂ. ಸಂಭಾವನೆ ಪಡೆದರೆ, ಕೊಹ್ಲಿ 15 ಕೋಟಿ ರೂ ಪಡೆಯುತ್ತಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...