alex Certify
ಕನ್ನಡ ದುನಿಯಾ       Mobile App
       

Kannada Duniya

ಕೊಹ್ಲಿಗೆ ವಿಶ್ರಾಂತಿ–ರೋಹಿತ್ ಗೆ ನಾಯಕತ್ವ ಸಾಧ್ಯತೆ

ind-sl1-2

ಭಾರತ ಕ್ರಿಕೆಟ್ ಟೀಂ ಸದ್ಯ ಶ್ರೀಲಂಕಾ ಪ್ರವಾಸದಲ್ಲಿದೆ. ಶ್ರೀಲಂಕಾ ವಿರುದ್ಧ ಎರಡು ಟೆಸ್ಟ್ ಪಂದ್ಯಗಳನ್ನಾಡಿರುವ ಭಾರತ ಎರಡರಲ್ಲೂ ಗೆಲುವು ಸಾಧಿಸಿದೆ. ಇನ್ನೊಂದು ಟೆಸ್ಟ್ ಪಂದ್ಯದಲ್ಲೂ ಗೆಲುವು ಸಾಧಿಸುವ ಮೂಲಕ ಕ್ಲೀನ್ ಸ್ವಿಪ್ ಕನಸು ಕಾಣ್ತಿದೆ.

ಟೆಸ್ಟ್ ಸರಣಿ ನಂತ್ರ 5 ಏಕದಿನ ಪಂದ್ಯ ಹಾಗೂ ಒಂದು ಟಿ-ಟ್ವೆಂಟಿ ಪಂದ್ಯಗಳನ್ನಾಡಲಿದೆ. ಈ ಎರಡೂ ಪಂದ್ಯಕ್ಕೆ  ಶೀಘ್ರದಲ್ಲಿಯೇ ಆಯ್ಕೆ ಸಮಿತಿ ತಂಡವನ್ನು ಘೋಷಣೆ ಮಾಡಲಿದೆ. ಶ್ರೀಲಂಕಾ ಪ್ರವಾಸಕ್ಕೂ ಮುನ್ನ ವೆಸ್ಟ್ ಇಂಡೀಸ್ ವಿರುದ್ಧ 5 ಏಕದಿನ ಪಂದ್ಯ ಹಾಗೂ ಒಂದು ಟಿ-ಟ್ವೆಂಟಿ ಪಂದ್ಯವನ್ನಾಡಿತ್ತು. ಇದಕ್ಕೂ ಮೊದಲು ಚಾಂಪಿಯನ್ಸ್ ಟ್ರೋಫಿ ನಡೆದಿತ್ತು. ಹಾಗಾಗಿ ನಾಯಕ ವಿರಾಟ್ ಕೊಹ್ಲಿಗೆ ವಿಶ್ರಾಂತಿ ಪಡೆಯಲು ಸಾಕಷ್ಟು ಸಮಯ ಸಿಗಲಿಲ್ಲ.

ವಿಶ್ರಾಂತಿ ಕೊರತೆ ಕೊಹ್ಲಿ ಆಟದ ಮೇಲೆ ಪ್ರಭಾವ ಬೀರುವ ಸಾಧ್ಯತೆಯಿದೆ. ಹಾಗಾಗಿ ಆಯ್ಕೆ ಸಮಿತಿ ವಿರಾಟ್ ಗೆ ವಿಶ್ರಾಂತಿ ನೀಡುವ ಸಾಧ್ಯತೆಯಿದೆ. ಒಂದು ವೇಳೆ ಟಿ-20 ಪಂದ್ಯದಲ್ಲಿ ವಿರಾಟ್ ಕೊಹ್ಲಿಗೆ ವಿಶ್ರಾಂತಿ ಸಿಕ್ಕಲ್ಲಿ ರೋಹಿತ್ ಶರ್ಮಾಗೆ ತಂಡದ ನಾಯಕತ್ವ ಸಿಗುವ ಸಾಧ್ಯತೆಯಿದೆ. ರೋಹಿತ್ ಶರ್ಮಾ ಉತ್ತಮ ಪ್ರದರ್ಶನ ನೀಡ್ತಾ ಇದ್ದು, ಐಪಿಎಲ್ ನಲ್ಲೂ ನಾಯಕತ್ವದ ಹೊಣೆ ಹೊತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...