alex Certify
ಕನ್ನಡ ದುನಿಯಾ       Mobile App
       

Kannada Duniya

ಕೊಹ್ಲಿ ತೋರಿದ ಪ್ರೀತಿಗೆ ಅನುಷ್ಕಾ ಶರ್ಮಾ ಫುಲ್ ಫಿದಾ

ಇಂಗ್ಲೆಂಡ್‌ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್‌ ಪಂದ್ಯದಲ್ಲಿ ನಾಯಕ ಕೊಹ್ಲಿ ತಾವು ಬಾರಿಸಿದ ಶತಕವನ್ನು ಮಡದಿ ಅನುಷ್ಕಾ ಶರ್ಮಾಗೆ ಅರ್ಪಿಸಿದ್ದಾರೆ.

ತಮ್ಮ ಕ್ರಿಕೆಟ್‌ ವೃತ್ತಿಯ 22 ನೇ ಟೆಸ್ಟ್‌ ಶತಕವನ್ನು ಬಾರಿಸಿದ ಬಳಿಕ ತಮ್ಮ ಮದುವೆಯ ಉಂಗುರಕ್ಕೆ ಮುತ್ತಿಕ್ಕುವ ಮೂಲಕ ಶತಕವನ್ನು ಅರ್ಪಿಸಿದ್ದಾರೆ. ಈ ಕುರಿತು ಟ್ವಿಟರ್‌ನಲ್ಲಿ ಬರೆದುಕೊಂಡಿರುವ ಕೊಹ್ಲಿಯ ಪ್ರೀತಿಗೆ ಅನುಷ್ಕಾ ಶರ್ಮಾ ಮತ್ತಷ್ಟು ಮನಸೋತಿದ್ದಾರೆ.

ಪಂದ್ಯದಲ್ಲಿ ಹಿಡಿತ ಸಾಧಿಸುವ ಹಂತದಲ್ಲಿದ್ದ ಇಂಗ್ಲೆಂಡ್‌ನ ಬೌಲರ್‌ಗಳನ್ನು ಮನಬಂದಂತೆ ದಂಡಿಸಿ, ನಾಯಕನ ಆಟ ಪ್ರದರ್ಶಿಸಿದ ಕೊಹ್ಲಿಗೆ ಅಭಿನಂದನೆಯನ್ನೂ ಅನುಷ್ಕಾ ಹೇಳಿದ್ದಾರೆ.

ಒಟ್ಟಾರೆ ಸುಮಾರು ಐದು ಗಂಟೆಗಳ ಕಾಲ ಆಟವಾಡಿದ ಕೊಹ್ಲಿ , 22 ಬೌಂಡರಿ, ಒಂದು ಸಿಕ್ಸರ್‌ ಸಿಡಿಸಿ, 225 ಚೆಂಡುಗಳನ್ನ ಎದುರಿಸಿದ್ದಾರೆ. 135 ರನ್ನುಗಳನ್ನು ಪೇರಿಸುವ ಮೂಲಕ ಇಂಗ್ಲೆಂಡ್‌ ವಿರುದ್ಧ ಟೆಸ್ಟ್‌ ಕ್ರಿಕೆಟ್‌ನಲ್ಲಿ ಈವರೆಗಿನ ಜೀವನ ಶ್ರೇಷ್ಠ ಸಾಧನೆ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...