alex Certify
ಕನ್ನಡ ದುನಿಯಾ       Mobile App
       

Kannada Duniya

ವಿಂಡೀಸ್ ವಿರುದ್ಧದ ಸೋಲಿನ ಬಗ್ಗೆ ಬಾಯ್ಬಿಟ್ಟ ವಿರಾಟ್

virat-kohli a1 tweet

ವಿಶ್ವಕಪ್ ಟಿ-20 ಪಂದ್ಯಾವಳಿಯ ಎರಡನೇ ಸೆಮಿಫೈನಲ್ ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಟೀಂ ಇಂಡಿಯಾ ಸೋಲು ಕಂಡಿದ್ದು, ಫೈನಲ್ ಕನಸು ಭಗ್ನವಾಗಿದೆ. ಮುಂಬೈನ ವಾಂಖೇಡೆ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಭಾರತ, ವೆಸ್ಟ್ ಇಂಡೀಸ್ ತಂಡಕ್ಕೆ ಸವಾಲಿನ ಮೊತ್ತವನ್ನೇ ನೀಡಿತ್ತು.

ಟೀಂ ಇಂಡಿಯಾ ಸ್ಪೋಟಕ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಅಮೋಘ ಆಟ ಪ್ರದರ್ಶಿಸಿ, ಅಜೇಯ 89 ರನ್ ಗಳಿಸಿದ್ದು, 47 ಎಸೆತಗಳನ್ನು ಎದುರಿಸಿ, 11 ಬೌಂಡರಿ 1 ಸಿಕ್ಸರ್ ಸಿಡಿಸಿದ್ದರು. ಲೀಗ್ ಮ್ಯಾಚ್ ನಲ್ಲಿ ಆಸೀಸ್ ವಿರುದ್ಧದ ಪಂದ್ಯದಲ್ಲಿ ಅಬ್ಬರಿಸಿದಂತೆ ವಿಂಡೀಸ್ ವಿರುದ್ಧದ ಪಂದ್ಯದಲ್ಲಿಯೂ ಕೊಹ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶಿಸಿದರಾದರೂ, ವಿಂಡೀಸ್ ನ ಲೆಂಡ್ಸ್ ಸಿಮನ್ಸ್ ಭಾರತದ ಗೆಲುವನ್ನು ಕಸಿದುಕೊಂಡರು. ಇದರಿಂದಾಗಿ ಫೈನಲ್ ಪ್ರವೇಶದ ಕೋಟ್ಯಾಂತರ ಅಭಿಮಾನಿಗಳ ಆಸೆಗೆ ಭಗ್ನವಾಗಿದೆ.

ವಿಂಡೀಸ್ ವಿರುದ್ಧದ ಪಂದ್ಯದ ಸೋಲಿನ ನಂತರ, ವಿರಾಟ್ ಕೊಹ್ಲಿ ಮಾತನಾಡಿದ್ದಾರೆ. ಸೋಲಿನಿಂದ ನಿರಾಸೆಯಾಗುವುದು ಬೇಡ. ಆಶಾವಾದ ಹೊಂದಬೇಕು. ಒಂದು ಸೋಲಿನಿಂದ ಎಲ್ಲವೂ ಮುಗಿದಂತಲ್ಲ ಎಂದು ಟ್ವೀಟ್ ಮಾಡಿದ್ದು, ಜೊತೆಗೆ ಎರಡೂ ಕೈ ಇಲ್ಲದಿದ್ದರೂ, ಜಮ್ಮು ಕಾಶ್ಮೀರ ಅಂಗವಿಕಲರ ಕ್ರಿಕೆಟ್ ತಂಡದ ನಾಯಕನಾದ ಅಮೀರ್ ಹುಸೇನ್ ಅವರ ಫೋಟೋ ಶೇರ್ ಮಾಡಿದ್ದಾರೆ. ಆ ಮೂಲಕ ಸ್ಪೂರ್ತಿಯ ಸಂದೇಶ ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...