alex Certify ಇಲ್ಲಿದೆ ವಿರಾಟ್ ಕೊಹ್ಲಿ ಕುರಿತ ʼಇಂಟ್ರೆಸ್ಟಿಂಗ್ʼ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ವಿರಾಟ್ ಕೊಹ್ಲಿ ಕುರಿತ ʼಇಂಟ್ರೆಸ್ಟಿಂಗ್ʼ ಮಾಹಿತಿ

ಭಾರತ ಕ್ರಿಕೆಟ್ ತಂಡದ ಸ್ಪೋಟಕ ಬ್ಯಾಟ್ಸ್‌ ಮನ್ ವಿರಾಟ್ ಕೊಹ್ಲಿ, ಬ್ಯಾಟಿಂಗ್ ನಲ್ಲಿ ಕಮಾಲ್ ಮಾಡಿರುವಂತೆಯೇ, ಮೈದಾನದ ಆಚೆಗೂ ಸಖತ್ ಸುದ್ದಿಯಲ್ಲಿರುತ್ತಾರೆ. ಹೀಗಾಗಿ ಅಭಿಮಾನಿಗಳಿಗೆ ಕುತೂಹಲ ಜಾಸ್ತಿ.

ಭಾರತ ಟೆಸ್ಟ್ ಕ್ರಿಕೆಟ್ ತಂಡದ ನಾಯಕರೂ ಆಗಿರುವ 31 ವರ್ಷದ ವಿರಾಟ್ ಕೊಹ್ಲಿ, ತಾವು ವಾಣಿಜ್ಯೋದ್ಯಮದಲ್ಲಿಯೂ ತೊಡಗಿಸಿಕೊಂಡಿದ್ದಾರೆ. ಪ್ರತಿಷ್ಠಿತ ಕಂಪನಿಗಳು ಸೇರಿದಂತೆ ಸುಮಾರು 15ಕ್ಕೂ ಅಧಿಕ ಕಂಪನಿಗಳಿಗೆ ವಿರಾಟ್ ಕೊಹ್ಲಿ ಪ್ರಚಾರ ರಾಯಭಾರಿಯಾಗಿದ್ದು, 2015 ರಲ್ಲಿ ಬರೋಬ್ಬರಿ 100 ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಜಾಹೀರಾತು ಒಡಂಬಡಿಕೆಗಳಿಗೆ ಸಹಿ ಹಾಕುವ ಮೂಲಕ ಬೇರೆ ಆಟಗಾರರನ್ನು  ಮೀರಿಸಿದ್ದರು. ಈಗಲೂ ಅವರ ಜಾಹೀರಾತು ಒಪ್ಪಂದಗಳ ವಾರ್ಷಿಕ ವಹಿವಾಟು ನೂರಾರು ಕೋಟಿ ರೂಪಾಯಿಗಳನ್ನು ಮೀರಿದೆ.

ನಾನು ಯಾವ ಕ್ಷೇತ್ರದಲ್ಲಿ ತೊಡಗಿದ್ದೇನೆಯೋ ಅಲ್ಲೆಲ್ಲಾ ವಾಣಿಜ್ಯೋದ್ಯಮಿಯ ರೀತಿ ತೊಡಗಿಕೊಂಡಿದ್ದೇನೆ. ಬಂದ ಜಾಹೀರಾತುಗಳನ್ನೆಲ್ಲಾ ಒಪ್ಪಿಕೊಳ್ಳಲಾರೆ. ನನ್ನ ಜಾಹೀರಾತು ಮತ್ತು ವಾಣಿಜ್ಯ ವ್ಯವಹಾರಗಳು ಯಾವುದಾದರೂ ರೀತಿಯಲ್ಲಿ ಜನರಿಗೆ ಸಹಕಾರಿಯಾಗಿವೆ ಎಂದು ವಿರಾಟ್ ಕೊಹ್ಲಿ ಹೇಳುತ್ತಾರೆ. ಪತ್ನಿ ಅನುಷ್ಕಾ ಶರ್ಮಾರೊಂದಿಗೆ ದಾಂಪತ್ಯ ಜೀವನದಲ್ಲಿರುವ ವಿರಾಟ್‌ ಕೊಹ್ಲಿ ಈಗ ಮುದ್ದಾದ ಹೆಣ್ಣು ಮಗುವಿನ ತಂದೆಯಾಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...