alex Certify
ಕನ್ನಡ ದುನಿಯಾ       Mobile App
       

Kannada Duniya

160 ರನ್ ಗಳಿಸಿ ಐದು ದಾಖಲೆ ಬರೆದ ವಿರಾಟ್

ದಕ್ಷಿಣ ಆಫ್ರಿಕಾದ ಕೇಪ್ ಟೌನ್ ನಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಅಬ್ಬರಿಸಿದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 160 ರನ್ ಕಲೆಹಾಕಿದ್ದಾರೆ. ಈ ಸರಣಿಯಲ್ಲಿ ಎರಡನೇ ಬಾರಿ ಶತಕ ಸಿಡಿಸಿದ ಕೊಹ್ಲಿ ಅನೇಕ ದಾಖಲೆಗಳನ್ನು ಬರೆದಿದ್ದಾರೆ.

ಏಕದಿನ ಪಂದ್ಯದಲ್ಲಿ ಕೊಹ್ಲಿ ಸಿಡಿಸಿದ 34ನೇ ಶತಕ ಇದಾಗಿದೆ. ಇದ್ರ ಜೊತೆಗೆ ದಕ್ಷಿಣ ಆಫ್ರಿಕಾ ನೆಲದಲ್ಲಿ ಒಂದೇ ಸರಣಿಯಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ನಾಯಕ ಎಂಬ ಪಟ್ಟ ಕೊಹ್ಲಿ ಮುಡಿಗೇರಿದೆ.

ಇದ್ರ ಜೊತೆಗೆ ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಒಂದಕ್ಕಿಂತ ಹೆಚ್ಚು ಶತಕ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಕೊಹ್ಲಿ ನಾಲ್ಕನೇ ಸ್ಥಾನ ಪಡೆದಿದ್ದಾರೆ. ಈ ದಾಖಲೆ ಪಟ್ಟಿಯಲ್ಲಿ ಕೆವಿನ್ ಪೀಟರ್ಸನ್ ಮೊದಲ ಸ್ಥಾನದಲ್ಲಿದ್ದಾರೆ. 2005ರಲ್ಲಿ ಆಫ್ರಿಕಾ ವಿರುದ್ಧ ನಡೆದ ಸರಣಿಯಲ್ಲಿ ಪೀಟರ್ಸನ್ 3 ಶತಕ ಸಿಡಿಸಿದ್ದರು.

ಇನ್ನು ಅತಿ ಹೆಚ್ಚು ಶತಕ ಸಿಡಿಸಿದ ನಾಯಕರ ಪಟ್ಟಿಯಲ್ಲಿ ಸೌರವ್ ಗಂಗೂಲಿಯನ್ನು ಕೊಹ್ಲಿ ಹಿಂದಿಕ್ಕಿದ್ದಾರೆ. ಗಂಗೂಲಿ 143 ಇನ್ನಿಂಗ್ಸ್ ನಲ್ಲಿ 11 ಶತಕ ಸಿಡಿಸಿದ್ದರು. ಕೊಹ್ಲಿ 43 ಇನ್ನಿಂಗ್ಸ್ ನಲ್ಲಿ 12 ಶತಕ ಸಿಡಿಸಿದ್ದಾರೆ.

ದಕ್ಷಿಣ ಆಫ್ರಿಕಾದಲ್ಲಿ ಅತಿ ಹೆಚ್ಚು ಶತಕ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಕೊಹ್ಲಿ ಮೂರನೇ ಸ್ಥಾನಕ್ಕೇರಿದ್ದಾರೆ. ಸೌರವ್ ಗಂಗೂಲಿ ಮೊದಲ ಸ್ಥಾನದಲ್ಲಿದ್ದರೆ ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ ಎರಡನೇ ಸ್ಥಾನದಲ್ಲಿದ್ದಾರೆ.

ದಕ್ಷಿಣ ಆಫ್ರಿಕಾದಲ್ಲಿ ಅತಿ ಹೆಚ್ಚು ಸ್ಕೂರ್ ಮಾಡಿದ ಆಟಗಾರ ಎಂಬ ಕಿರೀಟವೂ ಕೊಹ್ಲಿ ಮುಡಿಗೇರಿದೆ. ಸೌರವ್ ಗಂಗೂಲಿ 127 ರನ್ ಗಳಿಸಿದ್ದರು. ಕೊಹ್ಲಿ ಬುಧವಾರ 160 ರನ್ ಕಲೆ ಹಾಕಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...