alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ರಿಕೆಟ್ ಬೈಬಲ್ ಮುಖಪುಟದಲ್ಲಿ ವಿರಾಟ್ ಕೊಹ್ಲಿ

virat_7emgqgn

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ವಿಸ್ಡನ್ ಕ್ರಿಕೆಟರ್ಸ್ ಆಲ್ಮನಾಕ್ ನಲ್ಲಿ ಮಿಂಚುತ್ತಿದ್ದಾರೆ. ಪತ್ರಿಕೆಯ ಮುಖಪುಟದಲ್ಲಿ ಕೊಹ್ಲಿ ಫೋಟೋ ಹಾಕಲಾಗಿದೆ.

ಇಂಗ್ಲೆಂಡ್ ವಿರುದ್ಧ ನಡೆದ ಟೆಸ್ಟ್, ಏಕದಿನ ಹಾಗೂ ಟಿ-20 ಮೂರು ಸರಣಿಯಲ್ಲೂ ಭಾರತ ಜಯಗಳಿಸಲು ಕೊಹ್ಲಿ ಮಹತ್ವದ ಕೊಡುಗೆ ನೀಡಿದ್ದಾರೆ. ಹಾಗಾಗಿ ಅವರಿಗೆ ಈ ಗೌರವ ಸಂದಿದೆ. 2017 ರ ಈ ಪ್ರತಿ ಏಪ್ರಿಲ್ ನಲ್ಲಿ ಬಿಡುಗಡೆಯಾಗಲಿದೆ. ಕೊಹ್ಲಿ ವಿಸ್ಡನ್ ಕ್ರಿಕೆಟರ್ಸ್ ಆಲ್ಮನಾಕ್ ಕವರ್ ಪೇಜ್ ನಲ್ಲಿ ಸ್ಥಾನ ಪಡೆದ ಭಾರತದ ಎರಡನೇ ಆಟಗಾರರಾಗಿದ್ದಾರೆ. ಈ ಹಿಂದೆ ಸಚಿನ್ ಕವರ್ ಪೇಜ್ ನಲ್ಲಿ ಕಾಣಿಸಿಕೊಂಡಿದ್ದರು.

ವಿಸ್ಡನ್ ಕ್ರಿಕೆಟರ್ಸ್ ಆಲ್ಮನಾಕ್ ಬ್ರಿಟನ್ ನಲ್ಲಿ ಮುದ್ರಣವಾಗುವ ವಾರ್ಷಿಕ ಪತ್ರಿಕೆಯಾಗಿದೆ. ಇದನ್ನು ಕ್ರಿಕೆಟ್ ನ ಬೈಬಲ್ ಎಂದೇ ಕರೆಯಲಾಗುತ್ತದೆ. ವಿಸ್ಡನ್ ಕ್ರಿಕೆಟರ್ಸ್ ಆಲ್ಮನಾಕ್ ಸಂಪಾದಕರು ಕೊಹ್ಲಿ ಆಟಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಇತ್ತೀಚಿನ ವರ್ಷದಲ್ಲಿ ಕ್ರಿಕೆಟ್ ನಲ್ಲಿ ಕ್ರಾಂತಿ ತಂದವರು ಕೊಹ್ಲಿ ಎಂದು ಬರೆದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...