alex Certify
ಕನ್ನಡ ದುನಿಯಾ       Mobile App
       

Kannada Duniya

ದಾಖಲೆಗಳ ಸರದಾರ ಕೊಹ್ಲಿ ಯಶಸ್ಸಿಗೆ ಕಾರಣ ಯಾರು ಗೊತ್ತಾ?

ದಕ್ಷಿಣ ಆಫ್ರಿಕಾ ವಿರುದ್ಧದ ಕೊನೆಯ ಏಕದಿನ ಪಂದ್ಯಗಳಲ್ಲಿ 35ನೇ ಶತಕ ಸಿಡಿಸುವ ಮೂಲಕ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತಷ್ಟು ದಾಖಲೆಗಳ ಸರದಾರ ಎನಿಸಿಕೊಂಡಿದ್ದಾರೆ. ಸರಣಿಯಲ್ಲಿ ಕೊಹ್ಲಿ 558 ರನ್ ಗಳಿಸಿದ್ದಾರೆ. ಈ ಮೂಲಕ ಏಕದಿನ ದ್ವಿಪಕ್ಷೀಯ ಸರಣಿಯಲ್ಲಿ ಅತಿ ಹೆಚ್ಚು ರನ್ ಸಿಡಿಸಿದ ಆಟಗಾರ ಎನಿಸಿಕೊಂಡಿದ್ದಾರೆ.

ಪಂದ್ಯಶ್ರೇಷ್ಠ ಮತ್ತು ಸರಣಿ ಶ್ರೇಷ್ಠ ಎರಡೂ ಪ್ರಶಸ್ತಿಯನ್ನು ಬಾಚಿಕೊಂಡ ಕೊಹ್ಲಿ, ತಮ್ಮ ಯಶಸ್ಸಿನ ಶ್ರೇಯವನ್ನು ಪತ್ನಿ ಅನುಷ್ಕಾ ಶರ್ಮಾಗೆ ನೀಡಿದ್ದಾರೆ. ಸರಣಿಯುದ್ದಕ್ಕೂ ತಮಗೆ ಪ್ರೇರಣೆ ನೀಡುತ್ತಲೇ ಬಂದ ಪತ್ನಿಗೆ ಯಶಸ್ಸಿನ ಕ್ರೆಡಿಟ್ ಸಲ್ಲಬೇಕು ಅಂತಾ ಮುಕ್ತ ಮನಸ್ಸಿನಿಂದ ಹೇಳಿಕೊಂಡ್ರು.

ಈ ಹಿಂದೆ ಅನುಷ್ಕಾಳಿಂದಾಗಿಯೇ ಕೊಹ್ಲಿ ಫಾರ್ಮ್ ಕಳೆದುಕೊಳ್ತಿದ್ದಾರೆ, ಉತ್ತಮ ಪ್ರದರ್ಶನ ನೀಡ್ತಿಲ್ಲ ಅನ್ನೋ ಆರೋಪಗಳು ಕೇಳಿ ಬಂದಿದ್ದವು. ಅದನ್ನು ಕೂಡ ಸ್ಮರಿಸಿದ ಕೊಹ್ಲಿ, ಜನರ ಮನಸ್ಸಿನಲ್ಲಿದ್ದ ತಪ್ಪು ಕಲ್ಪನೆಗಳಿಗೆ ತೆರೆ ಎಳೆದ್ರು. ಕಷ್ಟದಲ್ಲೂ ಜೊತೆಯಾದ ಪತ್ನಿ ಅನುಷ್ಕಾಳೇ ತಮಗೆ ಪ್ರೇರಣೆ ಅಂತಾ ಶ್ಲಾಘಿಸಿದ್ರು.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...