alex Certify
ಕನ್ನಡ ದುನಿಯಾ       Mobile App
       

Kannada Duniya

ಜಾಹೀರಾತು ಕ್ಷೇತ್ರದಲ್ಲೂ ಇವರೇ ನಂಬರ್ 1

kohli

ಕ್ರಿಕೆಟ್ ಅಭಿಮಾನಿಗಳಿಗೆಲ್ಲ ಈಗ ವಿರಾಟ್ ಕೊಹ್ಲಿ ಫೇವರಿಟ್. ಮಹೇಂದ್ರ ಸಿಂಗ್ ಧೋನಿಗಿಂತ ಹೆಚ್ಚಾಗಿ ವಿರಾಟ್ ಗೆ ಫ್ಯಾನ್ಸ್ ಇದ್ದಾರೆ. ಮೈದಾನದ ಹೊರಗೂ ಈಗ ಕೊಹ್ಲಿಗೆ ಡಿಮ್ಯಾಂಡ್ ಜಾಸ್ತಿ. ಅದಕ್ಕೆ ತಕ್ಕಂತೆ ಕೊಹ್ಲಿಯ ಜಾಹೀರಾತು ಶುಲ್ಕ ಕೂಡ ಗಗನಕ್ಕೇರಿದೆ. ಸದ್ಯ ಜಾಹೀರಾತು ಕ್ಷೇತ್ರದಲ್ಲಿ ಅತಿ ಹೆಚ್ಚು ಹಣ ಪಡೆಯುವ ಸೆಲೆಬ್ರಿಟಿ ಇವರು.

ವಿರಾಟ್ ದಿನವೊಂದಕ್ಕೆ ಜಾಹೀರಾತಿಗಾಗಿ ಪಡೆಯುವ ಹಣ ಎಷ್ಟು ಗೊತ್ತಾ? ಬರೋಬ್ಬರಿ 5 ಕೋಟಿ ರೂಪಾಯಿ. ಪೆಪ್ಸಿಕೋ ಕಂಪನಿ ಜೊತೆಗಿನ ಜಾಹೀರಾತು ಒಪ್ಪಂದದ ನವೀಕರಣದ ವೇಳೆ ಕೊಹ್ಲಿ ಶುಲ್ಕವನ್ನು ಹೆಚ್ಚಿಸಿಕೊಂಡಿದ್ದಾರೆ. ಇದಕ್ಕೂ ಮುನ್ನ ಮಹೇಂದ್ರ ಸಿಂಗ್ ಧೋನಿ ಅತಿ ಹೆಚ್ಚು ಶುಲ್ಕ ಪಡೆಯುವ ಸೆಲೆಬ್ರಿಟಿ ಎನಿಸಿಕೊಂಡಿದ್ರು.

ಆದ್ರೀಗ ಬಾಲಿವುಡ್ ಸ್ಟಾರ್ ಗಳಾದ ರಣವೀರ್ ಸಿಂಗ್, ರಣಬೀರ್ ಕಪೂರ್ ರನ್ನು ಕೂಡ ಕೊಹ್ಲಿ ಹಿಂದಿಕ್ಕಿದ್ದಾರೆ. ಇತ್ತೀಚೆಗಷ್ಟೆ ಅವರು ಪೂಮಾ ಕಂಪನಿ ಜೊತೆಗೆ 110 ಕೋಟಿ ರೂಪಾಯಿಯ 8 ವರ್ಷಗಳ ಜಾಹೀರಾತು ಒಪ್ಪಂದ ಮಾಡಿಕೊಂಡಿದ್ರು. ಆಡಿ ಕಾರ್, ಎಂ ಆರ್ ಎಫ್ ಟೈರ್, ಟಿಸ್ಸೊಟ್ ವಾಚಸ್, ಜಿಯೋನಿ ಫೋನ್ಸ್, ಬೂಸ್ಟ್, ಕೋಲ್ಗೇಟ್, ವಿಕ್ಸ್, ಹೀಗೆ 18ಕ್ಕೂ ಹೆಚ್ಚು ಬ್ರಾಂಡ್ ಗಳ ಜಾಹೀರಾತುಗಳಲ್ಲಿ ಕೊಹ್ಲಿ ಕಾಣಿಸಿಕೊಳ್ತಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...