alex Certify
ಕನ್ನಡ ದುನಿಯಾ       Mobile App
       

Kannada Duniya

ಬದಲಾಯ್ತು ಕೊಹ್ಲಿ ಇನ್ ಸ್ಟಾಗ್ರಾಂ ಪ್ರೊಫೈಲ್ ಫೋಟೋ

ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಇನ್ ಸ್ಟಾಗ್ರಾಂ ಪ್ರೊಫೈಲ್ ಫೋಟೋ ಬದಲಿಸಿದ್ದಾರೆ. ಅನುಷ್ಕಾ ಶರ್ಮಾ ಅವರೊಂದಿಗೆ ಇರುವ ರೆಡ್ ಕಾರ್ಪೆಟ್ ಫೋಟೋ ವನ್ನು ಪ್ರೊಫೈಲ್ ಗೆ ಹಾಕಿದ್ದಾರೆ.

ಮುಂಬೈನಲ್ಲಿ ಶನಿವಾರ ನಡೆದ ಭಾರತೀಯ ಕ್ರೀಡಾ ಸಮಾರಂಭದಲ್ಲಿ ರೆಡ್ ಕಾರ್ಪೆಟ್ ಗೌರವ ಪಡೆದ ಕೊಹ್ಲಿ, ಅನುಷ್ಕಾ ಜೊತೆಗೆ ತೆಗೆಸಿಕೊಂಡಿರುವ ಫೋಟೋವನ್ನು ಪ್ರೊಫೈಲ್ ಗೆ ಸೇರಿಸಿದ್ದಾರೆ.

ಮನದನ್ನೆಯೊಂದಿಗೆ ಸಂತಸದ ಕ್ಷಣದಲ್ಲಿ ಪಾಲ್ಗೊಂಡಿರುವ ಕೊಹ್ಲಿ ಸೂಟ್ ನಲ್ಲಿ ಕಾಣಿಸಿಕೊಂಡಿದ್ದು, ಅನುಷ್ಕಾ ರೆಡ್ ಡ್ರೆಸ್ ನಲ್ಲಿ ಮಿಂಚಿದ್ದಾರೆ. 2013 ರಿಂದ ಕೊಹ್ಲಿ –ಅನುಷ್ಕಾ ಪ್ರೀತಿಸುತ್ತಿದ್ದು, 2015 ರಲ್ಲಿ ಸ್ವಲ್ಪ ಕಾಲ ದೂರವಾಗಿದ್ದರು. 2016 ರ ಮಾರ್ಚ್ ಬಳಿಕ ಮತ್ತೆ ಜೊತೆಯಾಗಿದ್ದಾರೆ. ಅವರು ಡಿಸೆಂಬರ್ ನಲ್ಲಿ ಮದುವೆಯಾಗಲಿದ್ದಾರೆ ಎಂದು ಇತ್ತೀಚೆಗೆ ಭಾರೀ ಚರ್ಚೆಯಾಗಿತ್ತು.

ಸಂಜಯ್ ದತ್ ಬಯೊಪಿಕ್ ಚಿತ್ರದಲ್ಲಿ ಅನುಷ್ಕಾ ಶರ್ಮಾ ಅಭಿನಯಿಸುತ್ತಿದ್ದಾರೆ. ವಿರಾಟ್ ಕೊಹ್ಲಿ ಶ್ರೀಲಂಕಾ ವಿರುದ್ಧ ನವೆಂಬರ್ 16 ರಿಂದ ಆರಂಭವಾಗಲಿರುವ ಟೆಸ್ಟ್ ಪಂದ್ಯದಲ್ಲಿ ಆಡಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...