alex Certify
ಕನ್ನಡ ದುನಿಯಾ       Mobile App
       

Kannada Duniya

150 ರನ್ ಗಳಿಸ್ತಿದ್ದಂತೆ ಅನುಷ್ಕಾ ನೆನಪಿಸಿಕೊಂಡ ಕೊಹ್ಲಿ ಮೈದಾನದಲ್ಲಿ ಮಾಡಿದ್ದೇನು?

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಸೆಂಚುರಿಯನ್ ಟೆಸ್ಟ್ ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 153 ರನ್ ಗಳಿಸಿದ್ದಾರೆ. ಇನ್ನಿಂಗ್ಸ್ ನಲ್ಲಿ 150 ರನ್ ಗಳಿಸುತ್ತಿದ್ದಂತೆ ಕೊಹ್ಲಿಗೆ ಪತ್ನಿ ಅನುಷ್ಕಾ ನೆನಪಾಗಿದೆ. ಮೈದಾನದಲ್ಲಿಯೇ ತಮ್ಮ ಪ್ರೀತಿಯನ್ನು ತೋರಿಸಿದ್ದಾರೆ ಕೊಹ್ಲಿ.

ವಿರಾಟ್ ಕೊಹ್ಲಿ 89ನೇ ಓವರ್ ನಲ್ಲಿ 150 ರನ್ ಗಳಿಸಿದ್ರು. ರನ್ ಪೂರ್ಣಗೊಳಿಸುತ್ತಿದ್ದಂತೆ ಕೊಹ್ಲಿ ಕುತ್ತಿಗೆಗೆ ಹಾಕಿದ್ದ ನಿಶ್ಚಿತಾರ್ಥದ ರಿಂಗ್ ತೆಗೆದು ಅದಕ್ಕೆ ಮುತ್ತಿಟ್ಟರು. ಕೊಹ್ಲಿ ಬಹಿರಂಗವಾಗಿ ಪ್ರೀತಿ ವ್ಯಕ್ತಪಡಿಸಿದ್ದು ಇದೇ ಮೊದಲಲ್ಲ. ಈ ಹಿಂದೆ ಕೂಡ ಕೊಹ್ಲಿ ಪ್ರೀತಿ ವ್ಯಕ್ತಪಡಿಸಿದ್ದರು. ಕ್ರೀಡಾಂಗಣದಲ್ಲಿದ್ದ ಅನುಷ್ಕಾ ಕಡೆ ತಿರುಗಿ ಮುತ್ತಿಟ್ಟಿದ್ದರು. ಆಗ ಮದುವೆಯಾಗಿರಲಿಲ್ಲ. ಈಗ ಮದುವೆಯಾಗಿದೆ.

ಕೆಲ ದಿನಗಳ ಹಿಂದಷ್ಟೇ ಮದುವೆಯಾಗಿರುವ ಕೊಹ್ಲಿ ಸದ್ಯ ಪತ್ನಿಯಿಂದ ದೂರವಿದ್ದಾರೆ. ಅನುಷ್ಕಾ ಭಾರತಕ್ಕೆ ವಾಪಸ್ ಬಂದಿದ್ದು ಶೂಟಿಂಗ್ ಶುರುಮಾಡಿದ್ದಾಳೆ. ಅತ್ತ ಕೊಹ್ಲಿ ದಕ್ಷಿಣ ಆಫ್ರಿಕಾ ಮೈದಾನದಲ್ಲಿ ಮಿಂಚುತ್ತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...