alex Certify
ಕನ್ನಡ ದುನಿಯಾ       Mobile App
       

Kannada Duniya

ವೆಟ್ಟೋರಿ ಕನಸಿನ ತಂಡಕ್ಕೆ ಕೊಹ್ಲಿ ಕ್ಯಾಪ್ಟನ್

ನ್ಯೂಜಿಲೆಂಡ್ ನ ಮಾಜಿ ಸ್ಪಿನ್ನರ್ ಡೇನಿಯಲ್ ವೆಟ್ಟೋರಿ ಸಾರ್ವಕಾಲಿಕ ಕ್ರಿಕೆಟ್ ಟೀಂ ಒಂದನ್ನು ರೆಡಿ ಮಾಡಿದ್ದಾರೆ. ಆ ತಂಡದ ನಾಯಕರಾಗಿ ವಿರಾಟ್ ಕೊಹ್ಲಿಯನ್ನು ಆಯ್ಕೆ ಮಾಡಿದ್ದಾರೆ. ರಿಕಿ ಪಾಂಟಿಂಗ್, ಸಚಿನ್ ತೆಂಡೂಲ್ಕರ್ ಅವರಂತಹ ಘಟಾನುಘಟಿಗಳಿದ್ರೂ ಕ್ಯಾಪ್ಟನ್ ಆಗಿ ವೆಟ್ಟೋರಿ ಕೊಹ್ಲಿಯನ್ನೇ ಆಯ್ಕೆ ಮಾಡಿಕೊಂಡಿದ್ದಾರೆ.

ಕುಮಾರ ಸಂಗಕ್ಕರ, ರಾಹುಲ್ ದ್ರಾವಿಡ್, ಎಬಿ ಡಿವಿಲಿಯರ್ಸ್ ಹಾಗೂ ರಿಚರ್ಡ್ ಹ್ಯಾಡ್ಲಿಯನ್ನೂ ಆಯ್ಕೆ ಮಾಡಿದ್ದಾರೆ. ಆದ್ರೆ ಜಾಕಸ್ ಕಾಲಿಸ್ ಗೆ 12ನೇ ಸ್ಥಾನ ನೀಡಿದ್ದಾರೆ. ಶೇನ್ ವಾರ್ನ್ ಹಾಗೂ ಮುತ್ತಯ್ಯ ಮುರಳೀಧರನ್ ಇಬ್ಬರಿಗೂ ತಂಡದಲ್ಲಿ ಸ್ಥಾನ ಸಿಕ್ಕಿದೆ.

ತಂಡದಲ್ಲಿರುವ ಏಕೈಕ ವೇಗದ ಬೌಲರ್ ಅಂದ್ರೆ ಗ್ಲೆನ್ ಮೆಗ್ರಾತ್. ಹ್ಯಾಡ್ಲೀ ಅವರನ್ನು ಬಿಟ್ರೆ ಕಿವೀಸ್ ನ ಯಾವೊಬ್ಬ ಆಟಗಾರರೂ ವೆಟ್ಟೋರಿಯ ಕನಸಿನ ತಂಡದಲ್ಲಿಲ್ಲ. ಮಹೇಂದ್ರ ಸಿಂಗ್ ಧೋನಿಗೆ ಕೂಡ ವೆಟ್ಟೋರಿ ಸ್ಥಾನ ನೀಡಿಲ್ಲ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕೋಚ್ ಆಗಿರೋದ್ರಿಂದ ವೆಟ್ಟೋರಿ ಕೊಹ್ಲಿಗೆ ಮಣೆ ಹಾಕಿದ್ದಾರೆ ಎನ್ನಲಾಗ್ತಿದೆ.

Daniel Vettori | All Time XI

📺 AB de Villiers scored another fine 💯 for Cricket South Africa today & features in Daniel Vettori's All Time XI!But who else makes the cut? 🤔

Posted by Lord's Cricket Ground on Wednesday, October 18, 2017

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...