alex Certify
ಕನ್ನಡ ದುನಿಯಾ       Mobile App
       

Kannada Duniya

ಐಪಿಎಲ್ ಗೂ ಮುನ್ನ ಸಹ ಆಟಗಾರರ ಜೊತೆ ಕೊಹ್ಲಿ ಸ್ಟೆಪ್

ಐಪಿಎಲ್ ಆವೃತ್ತಿ 11 ಶನಿವಾರದಿಂದ ಶುರುವಾಗಲಿದೆ. ಪಂದ್ಯಾವಳಿಗೆ ಮುನ್ನ ಆಟಗಾರರು ಕಠಿಣ ಅಭ್ಯಾಸ ನಡೆಸ್ತಿದ್ದಾರೆ. ಇದ್ರ ಮಧ್ಯೆಯೇ ಆಟಗಾರರ ಮೋಜು-ಮಸ್ತಿ ಕೂಡ ಶುರುವಾಗಿದೆ. ಆರ್ ಸಿ ಬಿ ತಂಡದ ಆಟಗಾರರ ಜೊತೆ ಉತ್ತಮ ಸಂಬಂಧ ಹೊಂದಿರುವ ನಾಯಕ ವಿರಾಟ್ ಕೊಹ್ಲಿ, ಸಹ ಆಟಗಾರರ ಜೊತೆ ಎಂಜಾಯ್ ಮಾಡಿದ ವಿಡಿಯೋವೊಂದು ವೈರಲ್ ಆಗಿದೆ.

ಮಂಗಳವಾರ ಸಂಜೆ ಆರ್ ಸಿ ಬಿ ತಂಡದ ಆಟಗಾರ ಯಜುವೇಂದ್ರ ಚಹಾಲ್ ಟ್ವೀಟರ್ ಅಕೌಂಟ್ ನಲ್ಲಿ ವಿಡಿಯೋ ಒಂದನ್ನು ಹಂಚಿಕೊಂಡಿದ್ದಾರೆ. ವಿರಾಟ್ ಕೊಹ್ಲಿ, ಚಹಾಲ್ ಮತ್ತು ಮೆಕಲಮ್ ಡಾನ್ಸ್ ಮಾಡ್ತಿರುವ ವಿಡಿಯೋ ಇದಾಗಿದೆ. ಡಾನ್ಸ್ ಫ್ಲೋರ್ ನಲ್ಲಿ ಮೆಕಲಮ್, ಚಹಾಲ್ ಜೊತೆ ಕೊಹ್ಲಿ ಹೆಜ್ಜೆ ಹಾಕಿದ್ದಾರೆ.

ಇದೇ ಮೊದಲ ಬಾರಿ ಮೆಕಲಮ್ ಆರ್ ಸಿ ಬಿ ತಂಡದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಹಿಂದೆ ದೆಹಲಿ ಹಾಗೂ ಕೊಲ್ಕತ್ತಾ ಪರ ಮೆಕಲಮ್ ಆಟವಾಡಿದ್ದರು.

ಮಂಗಳವಾರ ಬೆಳಿಗ್ಗೆ ಕೊಹ್ಲಿ ನೆಟ್ ಪ್ರ್ಯಾಕ್ಟಿಸ್ ಮಾಡಿದ್ದರು. ಇದ್ರ ಫೋಟೋವನ್ನು ಆರ್ ಸಿ ಬಿ ತನ್ನ ಟ್ವೀಟರ್ ಅಕೌಂಟ್ ನಲ್ಲಿ ಹಂಚಿಕೊಂಡಿತ್ತು. ಈವರೆಗೂ ಆರ್ ಸಿ ಬಿ ಖಾತೆಗೆ ಒಂದೇ ಒಂದು ಐಪಿಎಲ್ ಪ್ರಶಸ್ತಿ ಸಿಕ್ಕಿಲ್ಲ. ಸದ್ಯ ಕೊಹ್ಲಿ ಉತ್ತಮ ಫಾರ್ಮ್ ನಲ್ಲಿದ್ದು ತಂಡದ ಮೇಲೆ ನಿರೀಕ್ಷೆ ಹೆಚ್ಚಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...