alex Certify
ಕನ್ನಡ ದುನಿಯಾ       Mobile App
       

Kannada Duniya

ದೇಶ ಬಿಡುವ ವಿವಾದಿತ ಹೇಳಿಕೆ ಬಗ್ಗೆ ಮೌನ ಮುರಿದ ಕೊಹ್ಲಿ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಟ ಸಾಮಾನ್ಯವಾಗಿದೆ. ಕೆಲ ವಿದೇಶಿ ಆಟಗಾರರು ಅವರಿಗಿಂತ ಉತ್ತಮವಾಗಿ ಆಡ್ತಾರೆಂಬ ಮಾತಿಗೆ ವಿರಾಟ್ ಕೊಹ್ಲಿ ಪ್ರತ್ಯುತ್ತರ ನೀಡಿದ್ದರು. ಟ್ವೀಟರ್ ನಲ್ಲಿ ವಿಡಿಯೋ ಹಾಕಿದ್ದ ಕೊಹ್ಲಿ ಯಾರಿಗೆ ಭಾರತೀಯ ಆಟಗಾರರ ಆಟ ಇಷ್ಟವಾಗಲ್ಲವೋ ಅವ್ರು ದೇಶ ಬಿಡಬಹುದೆಂದು ಸಲಹೆ ನೀಡಿದ್ದರು.

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಈ ವಿಡಿಯೋ ವಿವಾದಕ್ಕೆ ಕಾರಣವಾಗಿತ್ತು. ಸಾಮಾಜಿಕ ಜಾಲತಾಣದಲ್ಲಿ ಕೊಹ್ಲಿ ಟ್ರೋಲರ್ ಬಾಯಿಗೆ ಆಹಾರವಾಗಿದ್ದರು. ಈಗ ಕೊಹ್ಲಿ ಮೌನ ಮುರಿದಿದ್ದಾರೆ. ಟ್ವೀಟರ್ ಮೂಲಕವೇ ಟ್ರೋಲರ್ ಗೆ ಉತ್ತರ ನೀಡಿದ್ದಾರೆ.

ಟ್ರೋಲಿಂಗ್ ಮಾಡೋದು ನನ್ನ ಕೆಲಸವಲ್ಲ. ನಾನು ಟ್ರೋಲ್ ಆಗೋದ್ರಲ್ಲಿ ತೃಪ್ತಿ ಪಡುತ್ತೇನೆ. ನನಗೂ ಸ್ವಾತಂತ್ರ್ಯವಿದೆ.ಹಬ್ಬದ ಸಮಯ ಇದು. ಶಾಂತವಾಗಿ ಹಬ್ಬವನ್ನು ಆಚರಿಸಿ. ಪ್ರತಿಯೊಬ್ಬರನ್ನೂ ಪ್ರೀತಿಸಿ ಎಂದು ಕೊಹ್ಲಿ ಟ್ವಿಟ್ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...