alex Certify
ಕನ್ನಡ ದುನಿಯಾ       Mobile App
       

Kannada Duniya

ಬೆಂಗಳೂರು ಘಟನೆ ಬಗ್ಗೆ ಕೊಹ್ಲಿ ಪ್ರತಿಕ್ರಿಯೆ

vk1

ಡಿಸೆಂಬರ್ 31ರ ರಾತ್ರಿ ಬೆಂಗಳೂರಿನಲ್ಲಿ ನಡೆದ ಘಟನೆ ಬಗ್ಗೆ ದೇಶ-ವಿದೇಶಗಳಿಂದ ಪ್ರತಿಕ್ರಿಯೆ ಬರ್ತಾ ಇದೆ. ಯುವತಿ ಮೇಲೆ ನಡೆದ ದಾಳಿಯನ್ನು ಖಂಡಿಸಲಾಗ್ತಾ ಇದೆ. ಭಾರತ ಟೆಸ್ಟ್ ತಂಡದ ನಾಯಕ ವಿರಾಟ್ ಕೊಹ್ಲಿ ಕೂಡ ಈ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.

ಇದು ಅವಮಾನಕರ ಘಟನೆ ಎಂದಿರುವ ಕೊಹ್ಲಿ, ಎಲ್ಲರೂ ಒಟ್ಟಾಗಿ ಇದನ್ನು ವಿರೋಧಿಸಬೇಕೆಂದಿದ್ದಾರೆ. ದೇಶದಲ್ಲಿ ಎಲ್ಲರಿಗೂ ಸಮಾನ ಸುರಕ್ಷತೆ ಹಾಗೂ ಸಮಾನತೆ ಬೇಕು ಎಂದಿದ್ದಾರೆ. ಟ್ವೀಟರ್ ನಲ್ಲಿ ವಿಡಿಯೋ ಅಪ್ ಲೋಡ್ ಮಾಡಿರುವ ಕೊಹ್ಲಿ ಈ ಘಟನೆಯನ್ನು ಖಂಡಿಸಿದ್ದಾರೆ. ಈ ಘಟನೆ ನೋವು ತಂದಿದೆ ಎಂದಿದ್ದಾರೆ.

ಘಟನೆ ಬಗ್ಗೆ ವಿರೋಧ ವ್ಯಕ್ತಪಡಿಸದೆ ಸುಮ್ಮನಿರುವವರ ಬಗ್ಗೆಯೂ ಕೊಹ್ಲಿ ಪ್ರತಿಕ್ರಿಯೆ ನೀಡಿದ್ದಾರೆ. ಅವರ ಮನೆಯಲ್ಲಿಯೇ ಅಥವಾ ಅವರ ಸಂಬಂಧಿಕರ ಮನೆಯಲ್ಲಿ ಇಂಥ ಘಟನೆ ನಡೆದಿದ್ದರೆ ಸುಮ್ಮನಿರ್ತಾ ಇದ್ದರಾ ಎಂದು ಪ್ರಶ್ನೆ ಮಾಡಿದ್ದಾರೆ. ಈ ಘಟನೆಗೆ ಮಹಿಳೆಯರ ಡ್ರೆಸ್ ಕಾರಣ ಎನ್ನುವುದು ತಪ್ಪು. ಮಹಿಳೆಯರು ಅವರಿಗಿಷ್ಟವಾದ ಡ್ರೆಸ್ ಹಾಕಿಕೊಳ್ಳುತ್ತಾರೆ. ಅದನ್ನು ಪ್ರಶ್ನೆ ಮಾಡುವ ಅಧಿಕಾರ ಯಾರಿಗೂ ಇಲ್ಲ. ಮಹಿಳೆ ಡ್ರೆಸ್ ಇದಕ್ಕೆ ಕಾರಣ ಎಂಬುದು ಮತ್ತಷ್ಟು ಮುಜುಗರ ತರುವ ಸಂಗತಿ ಎಂದಿದ್ದಾರೆ ಕೊಹ್ಲಿ.

 

 

 

Subscribe Newsletter

Get latest updates on your inbox...

Opinion Poll

  • ಕಪ್ಪು ಹಣಕ್ಕೆ ಕಡಿವಾಣ ಹಾಕುವ ಕೇಂದ್ರ ಸರ್ಕಾರದ ಪ್ರಯತ್ನ ವಿಫಲವಾಗಿದೆಯೇ..?

    View Results

    Loading ... Loading ...