alex Certify
ಕನ್ನಡ ದುನಿಯಾ       Mobile App
       

Kannada Duniya

ದೆಹಲಿ ಟೆಸ್ಟ್ ನ 2 ನೇ ದಿನವೂ ದಾಖಲೆ ಬರೆದ ಕೊಹ್ಲಿ

ನವದೆಹಲಿ: ಇಲ್ಲಿನ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಪ್ರವಾಸಿ ಶ್ರೀಲಂಕಾ ವಿರುದ್ಧ ನಡೆಯುತ್ತಿರುವ, 3 ನೇ ಟೆಸ್ಟ್ ಪಂದ್ಯದಲ್ಲಿ, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಭರ್ಜರಿ ದ್ವಿಶತಕ ಗಳಿಸಿದ್ದಾರೆ.

ನಿನ್ನೆ 156 ರನ್ ಗಳಿಸಿ ಅಜೇಯರಾಗುಳಿದಿದ್ದ ಕೊಹ್ಲಿ ಇಂದು ಆಟ ಮುಂದುವರೆಸಿ ಭರ್ಜರಿ ದ್ವಿಶತಕ ಗಳಿಸಿದ್ದಾರೆ. 63 ಟೆಸ್ಟ್ ಪಂದ್ಯಗಳಿಂದ ಅವರು 20 ಶತಕಗಳನ್ನು ಗಳಿಸಿದ್ದಾರೆ. ಇದರಲ್ಲಿ 6 ದ್ವಿಶತಕ ಸೇರಿವೆ.

ಕೊಹ್ಲಿ ಅತಿಹೆಚ್ಚು ದ್ವಿಶತಕ ಗಳಿಸಿದ ಭಾರತದ 3 ನೇ ಆಟಗಾರನಾಗಿದ್ದಾರೆ. ತವರು ನೆಲದದಲ್ಲಿ ಕೊಹ್ಲಿ ಆರ್ಭಟ ಮುಂದುವರೆದಿದ್ದು, ಅವರನ್ನು ನಿಯಂತ್ರಿಸಲು ಲಂಕಾ ಬೌಲರ್ ಗಳು ಬೆವರಿಳಿಸುತ್ತಿದ್ದಾರೆ.

ಇತ್ತೀಚಿನ ವರದಿ ಬಂದಾಗ ಭಾರತ ಮೊದಲ ಇನಿಂಗ್ಸ್ ನಲ್ಲಿ 4 ವಿಕೆಟ್ ನಷ್ಟಕ್ಕೆ 474 ರನ್ ಗಳಿಸಿ ಆಟ ಮುಂದುವರೆಸಿದೆ. ಕೊಹ್ಲಿ 213, ರೋಹಿತ್ ಶರ್ಮಾ 51 ರನ್ ಗಳಿಸಿ ಆಟವಾಡುತ್ತಿದ್ದಾರೆ.

ತವರು ನೆಲದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಕೊಹ್ಲಿ ಹಲವು ದಾಖಲೆ ಬರೆದಿದ್ದಾರೆ. ಸರಣಿಯ ಪ್ರತಿ ಪಂದ್ಯದಲ್ಲೂ ಶತಕ, ಸತತ 2 ನೇ ದ್ವಿಶತಕ, ಅಂತರರಾಷ್ಟ್ರೀಯ ಕ್ರಿಕೆಟ್ ನಲ್ಲಿ ಒಂದೇ ವರ್ಷ 11 ಶತಕ ಗಳಿಸಿದ್ದಾರೆ. 6 ದ್ವಿಶತಕ ಗಳಿಸಿದ ಮೊದಲ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...