alex Certify
ಕನ್ನಡ ದುನಿಯಾ       Mobile App
       

Kannada Duniya

ಚೇಸಿಂಗ್ ಮಾಡೋದ್ರಲ್ಲಿ ವಿರಾಟ್ ಕೊಹ್ಲಿಗಿಲ್ಲ ಸರಿಸಾಟಿ

kohli-gg

ಭಾರತ ಕ್ರಿಕೆಟ್ ತಂಡದ ಸ್ಪೋಟಕ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ, ನ್ಯೂಜಿಲೆಂಡ್ ವಿರುದ್ಧ ಗಳಿಸಿದ ಅಮೋಘ ಶತಕದ ಮೂಲಕ ದಾಖಲೆಗಳನ್ನೆಲ್ಲಾ ಧೂಳೀಪಟ ಮಾಡಿದ್ದಾರೆ.

134 ಎಸೆತಗಳನ್ನು ಎದುರಿಸಿದ ಕೊಹ್ಲಿ 16 ಬೌಂಡರಿ, 1 ಸಿಕ್ಸರ್ ಒಳಗೊಂಡ 154 ರನ್ ಗಳಿಸಿ ಅಜೇಯರಾಗುಳಿದಿದ್ದಾರೆ. ಇದು ಏಕದಿನ ಕ್ರಿಕೆಟ್ ನಲ್ಲಿ ಕೊಹ್ಲಿ ಗಳಿಸಿದ 26 ನೇ ಶತಕವಾಗಿದೆ. ವಿರಾಟ್ ಕೊಹ್ಲಿ ಈಗ ಶತಕಗಳ ಸರದಾರನಾಗಿ ಹೊರ ಹೊಮ್ಮಿದ್ದು, ಹಲವು ದಾಖಲೆಗಳನ್ನು ಹಿಂದಿಕ್ಕಿದ್ದಾರೆ. ಚೇಸಿಂಗ್ ನಲ್ಲಿ ಹೆಚ್ಚು ಶತಕ ಗಳಿಸಿದ ಆಟಗಾರನಾಗಿ ಸಚಿನ್ ತೆಂಡೂಲ್ಕರ್ ದಾಖಲೆಯನ್ನು ಹಿಂದಿಕ್ಕಿದ್ದಾರೆ.

ವಿರಾಟ್ ಕೊಹ್ಲಿ ಚೇಸಿಂಗ್ ಇನ್ನಿಂಗ್ಸ್ ಗಳಲ್ಲಿ 59 ಪಂದ್ಯಗಳಿಂದ 14 ಶತಕ ಗಳಿಸಿದ್ದಾರೆ. ಅದೇ ರೀತಿ ಸಚಿನ್ 124 ಪಂದ್ಯಗಳಿಂದ 14 ಶತಕ ಬಾರಿಸಿದ್ದು, ದಿಲ್ಶಾನ್ 60 ಪಂದ್ಯಗಳಿಂದ 9 ಶತಕ ಗಳಿಸಿದ್ದಾರೆ.

ಅತಿ ಹೆಚ್ಚು ಶತಕ ಗಳಿಸಿದ ಪಟ್ಟಿಯಲ್ಲಿ 4 ನೇ ಸ್ಥಾನದಲ್ಲಿದ್ದ ಸಂಗಕ್ಕಾರ (25 ಶತಕ) ಅವರ ದಾಖಲೆಯನ್ನು ಕೊಹ್ಲಿ ಹಿಂದಿಕ್ಕಿದ್ದಾರೆ.

ಫಾಸ್ಟ್ ಸೆಂಚುರಿ ಬಾರಿಸುವುದರಲ್ಲಿಯೂ ಕೊಹ್ಲಿ ಎತ್ತಿದ ಕೈ. ಸಚಿನ್ ತೆಂಡೂಲ್ಕರ್ 452 ಇನ್ನಿಂಗ್ಸ್ ಗಳಲ್ಲಿ 49 ಶತಕ ಗಳಿಸಿದ್ದು, 44.83 ಸರಾಸರಿ ಹೊಂದಿದ್ದಾರೆ. ರಿಕಿ ಪಾಂಟಿಂಗ್ 365 ಇನ್ನಿಂಗ್ಸ್ ಗಳಲ್ಲಿ 30 ಶತಕ ಗಳಿಸಿ, 42.04 ಸರಾಸರಿ ಹೊಂದಿದ್ದಾರೆ. 32.36 ಸರಾಸರಿಯಲ್ಲಿ ಸನತ್ ಜಯಸೂರ್ಯ 433 ಇನ್ನಿಂಗ್ಸ್ ಗಳಲ್ಲಿ 28 ಶತಕ ಬಾರಿಸಿದ್ದಾರೆ.

ಇವರೆಲ್ಲರನ್ನು ಹಿಂದಿಕ್ಕಿರುವ ಕೊಹ್ಲಿ 166 ಇನ್ನಿಂಗ್ಸ್ ಗಳಲ್ಲಿ 26 ಶತಕ ಗಳಿಸಿದ್ದು, 52.52 ಸರಾಸರಿ ಹೊಂದಿದ್ದಾರೆ. ಈ ಮೂಲಕ ವೇಗವಾಗಿ ಹೆಚ್ಚು ಸರಾಸರಿಯೊಂದಿಗೆ ಶತಕ ಗಳಿಸಿದ್ದು, ಚೇಸಿಂಗ್ ನಲ್ಲಿಯೂ ವಿಶ್ವರೂಪ ತೋರಿದ್ದಾರೆ. ಅನೇಕ ದಾಖಲೆಗಳನ್ನು ಹಿಂದಿಕ್ಕಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...