alex Certify
ಕನ್ನಡ ದುನಿಯಾ       Mobile App
       

Kannada Duniya

ಆಶಿಶ್ ನೆಹ್ರಾಗೆ ಸಿಕ್ತು ಹೊಸ ಜವಾಬ್ದಾರಿ

ಟೀಂ ಇಂಡಿಯಾದ ಮಾಜಿ ಚಾಂಪಿಯನ್ ತರಬೇತುದಾರ ಗ್ಯಾರಿ ಕರ್ಸ್ಟನ್ ಹಾಗೂ ಇತ್ತೀಚೆಗಷ್ಟೇ ಅಂತರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಹೇಳಿರುವ ಆಶಿಶ್ ನೆಹ್ರಾ ಗೆ ಹೊಸ ಜವಾಬ್ದಾರಿ ನೀಡಲಾಗಿದೆ. ಇವ್ರನ್ನು ಐಪಿಎಲ್ ಸೀಸನ್ 11ರ ಪಂದ್ಯಾವಳಿಗಾಗಿ ಬೆಂಗಳೂರು ರಾಯಲ್ ಚಾಲೆಂಜರ್ಸ್ ನ ಬ್ಯಾಟಿಂಗ್ ಹಾಗೂ ಬೌಲಿಂಗ್ ತರಬೇತುದಾರರಾಗಿ ಆಯ್ಕೆ ಮಾಡಲಾಗಿದೆ.

ಲೀಗ್ ನಲ್ಲಿ ಗ್ಯಾರಿ ಕರ್ಸ್ಟನ್ ಹಾಗೂ ನೆಹ್ರಾ ತಂಡದ ಮೆಂಟರ್ ಆಗಿಯೂ ಕೆಲಸ ಮಾಡಲಿದ್ದಾರೆ. ಕಳೆದ ವಾರ ಗ್ಯಾರಿ ಕರ್ಸ್ಟನ್ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಗ್ಯಾರಿ ಎರಡನೇ ಬಾರಿ ಐಪಿಎಲ್ ನಲ್ಲಿ ಕೆಲಸ ಮಾಡ್ತಿದ್ದಾರೆ.

2015 ರಲ್ಲಿ ಗ್ಯಾರಿ, ದೆಹಲಿ ಟೀಂನ ತರಬೇತುದಾರರಾಗಿದ್ದರು. ಮೂಲಗಳ ಪ್ರಕಾರ ಜನವರಿ 27 ಹಾಗೂ 28ರಂದು ಐಪಿಎಲ್ ತಂಡಕ್ಕೆ ಬಿಡ್ಡಿಂಗ್ ನಡೆಯಲಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...