alex Certify
ಕನ್ನಡ ದುನಿಯಾ       Mobile App
       

Kannada Duniya

ಕೊಹ್ಲಿ-ಅನುಷ್ಕಾ ತಂಗಿರುವ ಹೋಟೆಲ್ ಎಷ್ಟು ದುಬಾರಿ ಗೊತ್ತಾ?

ಕಳೆದ ಕೆಲ ದಿನಗಳಿಂದ ಸಾಮಾಜಿಕ ತಾಣಗಳನ್ನು ತುದಿಗಾಲಲ್ಲಿ ನಿಲ್ಲಿಸಿದ್ದ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಕೊನೆಗೂ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ. ಈ ತಾರಾ ಜೋಡಿಯ ಮದುವೆ ಇಟಲಿಯಲ್ಲಿ ಅದ್ಧೂರಿಯಾಗಿ ನೆರವೇರಿದೆ.

ಇಟಲಿಯ ಟಸ್ಕನ್ ನಲ್ಲಿರೋ ಬೊರ್ಗೊ ಫಿನೊಚಿಯೆಟೊ ಹೋಟೆಲ್ ಈ ಸ್ಟಾರ್ ವಿವಾಹಕ್ಕೆ ವೇದಿಕೆಯಾಗಿತ್ತು. ಕ್ರಿಸ್ಮಸ್ ಹಾಗೂ ಹೊಸವರ್ಷದ ಸಮಯದಲ್ಲಿ ಜನರು ಆಯ್ಕೆ ಮಾಡಿಕೊಳ್ಳೋ ಅತ್ಯಂತ ದುಬಾರಿ ಹೋಟೆಲ್ ಗಳಲ್ಲಿ ಇದಕ್ಕೆ ಎರಡನೇ ಸ್ಥಾನವಿದೆ.

ಈ ಹೋಟೆಲ್ ನಲ್ಲಿ ಒಂದು ವಾರ ಉಳಿದುಕೊಳ್ಳಲು 94,83,210 ರೂಪಾಯಿ ಖರ್ಚಾಗುತ್ತದೆ. ಅಂದ್ರೆ ಒಂದು ರಾತ್ರಿಗೆ 13.5 ಲಕ್ಷ ರೂಪಾಯಿ. ಬೊರ್ಗೊ ಫಿನೊಚಿಯೆಟೊ ಅನ್ನೋದು 800 ವರ್ಷಗಳಷ್ಟು ಹಳೆಯ ಗ್ರಾಮ. ಅದರ ಸಂಸ್ಥಾಪಕ ಜಾನ್ ಫಿಲಿಪ್ಸ್ ಈ ಹೋಟೆಲ್ ನ ಮಾಲೀಕ ಕೂಡ.

ಫ್ಲೋರೆನ್ಸ್ ವಿಮಾನ ನಿಲ್ದಾಣದಿಂದ ಇಲ್ಲಿಗೆ ಬರಲು ಒಂದು ಗಂಟೆ ಬೇಕು. ಈ ಲಕ್ಷುರಿ ಹೋಟೆಲ್ ನಲ್ಲಿ ಅಂಡಾಕಾರದ 60 ಅಡಿ ಈಜುಕೊಳವಿದೆ. ಸ್ಪಾ, ಜಿಮ್, ಟೆನಿಸ್ ಕೋರ್ಟ್ ಎಲ್ಲವನ್ನೂ ನಿರ್ಮಾಣ ಮಾಡಲಾಗಿದೆ. 22 ಬೆಡ್ ರೂಂಗಳನ್ನು ಹೊಂದಿರುವ ವಿಸ್ತಾರವಾದ ಹೋಟೆಲ್ ಇದು.

ಕೊಹ್ಲಿ ಹಾಗೂ ಅನುಷ್ಕಾ ವಿವಾಹದ ಹಿನ್ನೆಲೆಯಲ್ಲಿ ಹೋಟೆಲ್ ಸುತ್ತ ಭಾರೀ ಭದ್ರತೆ ಏರ್ಪಡಿಸಲಾಗಿತ್ತು. ಆಹ್ವಾನ ಪತ್ರಿಕೆ ಇದ್ರೆ ಮಾತ್ರ ಒಳಕ್ಕೆ ಎಂಟ್ರಿ. ಬೆಳಗ್ಗೆ ವೈಭವದ ಮದುವೆ ನೆರವೇರಿದ್ರೆ, ಸಂಜೆ ಪಾರ್ಟಿ ಕೂಡ ಆಯೋಜಿಸಲಾಗಿತ್ತು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...