alex Certify
ಕನ್ನಡ ದುನಿಯಾ       Mobile App
       

Kannada Duniya

ಕೊಹ್ಲಿ ಅನುಷ್ಕಾಗೆ ತೊಡಿಸಿರುವ ಉಂಗುರದ ಬೆಲೆ….

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ವಿವಾಹದ ಅದ್ಧೂರಿ, ಆಡಂಬರ ಸಾಕಷ್ಟು ಸುದ್ದಿ ಮಾಡ್ತಿದೆ. ನಿಶ್ಚಿತಾರ್ಥ ಶಾಸ್ತ್ರದಲ್ಲಿ ವಿರಾಟ್ ಕೊಹ್ಲಿ, ಅನುಷ್ಕಾಗೆ ತೊಡಿಸಿರುವ ಉಂಗುರ ಕೂಡ ಎಲ್ಲರ ಗಮನಸೆಳೆದಿದೆ.

ಅನುಷ್ಕಾಗೆ ಪರ್ಫೆಕ್ಟ್ ಆಗಿರೋ ಉಂಗುರವನ್ನು ಆಯ್ಕೆ ಮಾಡಲು ಕೊಹ್ಲಿ 3 ತಿಂಗಳು ಕಷ್ಟಪಟ್ಟಿದ್ದಾರಂತೆ. ಇದರ ಬೆಲೆ ಕೂಡ ಕಮ್ಮಿಯೇನಿಲ್ಲ, ಸರಿಸುಮಾರು 1 ಕೋಟಿಗಿಂತ್ಲೂ ಅಧಿಕ ಅಂತಾ ಹೇಳಲಾಗ್ತಿದೆ. ಬೆಲೆಗೆ ತಕ್ಕಂತೆ ವಜ್ರದುಂಗುರ ಕೂಡ ಅಷ್ಟೇ ಸುಂದರವಾಗಿದೆ.

ವಿಶೇಷ ಅಂದ್ರೆ ಮದುವೆ ನಡೆದಿರೋ ರೆಸಾರ್ಟ್ ಬಾಡಿಗೆಗಿಂತ್ಲೂ ಕೊಹ್ಲಿ, ಅನುಷ್ಕಾಗೆ ಕೊಟ್ಟಿರೋ ಉಂಗುರದ ಬೆಲೆಯೇ ಹೆಚ್ಚು. ಅತ್ಯಂತ ಅಪರೂಪದ ವಜ್ರವಿರೋ ಈ ಉಂಗುರವನ್ನು ಆಸ್ಟ್ರಿಯಾದ ಡಿಸೈನರ್ ವಿನ್ಯಾಸ ಮಾಡಿದ್ದಾರಂತೆ. ಈ ಉಂಗುರವನ್ನು ಒಂದೊಂದು ದಿಕ್ಕಿನಿಂದ ನೋಡಿದಾಗ್ಲೂ ಒಂದೊಂದು ತೆರನಾಗಿ ಕಾಣಿಸುತ್ತದೆ.

ಮದುವೆಗೂ ಮುನ್ನ ವಿರಾಟ್ ಹಾಗೂ ಅನುಷ್ಕಾ ಉಂಗುರ ಬದಲಾಯಿಸಿಕೊಂಡಿದ್ದಾರೆ. ನಿಶ್ಚಿತಾರ್ಥದಲ್ಲಿ ಅನುಷ್ಕಾ ಕೆಂಪು ಸೀರೆ ಉಟ್ಟು ಮಿಂಚಿದ್ರೆ, ಕೊಹ್ಲಿ ನೀಲಿ ಬಣ್ಣದ ಸೂಟ್ ತೊಟ್ಟು ಸಖತ್ ಹ್ಯಾಂಡ್ಸಮ್ ಆಗಿ ಕಾಣುತ್ತಿದ್ರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...