alex Certify
ಕನ್ನಡ ದುನಿಯಾ       Mobile App
       

Kannada Duniya

ಅಕ್ಕಿ ಜೊತೆ ಕೇಪ್ ಟೌನ್ ನಲ್ಲಿ ವಿರುಷ್ಕಾ ದಂಪತಿ ಪಾರ್ಟಿ

ಖ್ಯಾತ ಕ್ರಿಕೆಟಿಗ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಡಿಸೆಂಬರ್ 11 ರಂದು ಇಟಲಿಯಲ್ಲಿ ದಾಂಪತ್ಯ ಜೀವನಕ್ಕೆ ಕಾಲಿರಿಸಿದ್ದು, ಹನಿಮೂನ್ ಗೆ ಫಿನ್ ಲ್ಯಾಂಡ್ ಗೆ ತೆರಳಿದ್ದರು.

ಅದಾದ ಬಳಿಕ ಡಿಸೆಂಬರ್ 20 ರಂದು ನವದೆಹಲಿಯಲ್ಲಿ ಹಾಗೂ ಡಿಸೆಂಬರ್ 26 ರಂದು ಮುಂಬೈನಲ್ಲಿ ಎರಡು ಅದ್ದೂರಿ ಆರತಕ್ಷತೆಯನ್ನು ಏರ್ಪಡಿಸಿದ ವಿರುಷ್ಕಾ ದಂಪತಿ, ಇದೀಗ ದಕ್ಷಿಣ ಆಫ್ರಿಕಾಕ್ಕೆ ತೆರಳಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ 3 ಟೆಸ್ಟ್, 6 ಏಕದಿನ ಹಾಗೂ 3 ಟಿ-20 ಪಂದ್ಯಗಳನ್ನು ಟೀಮ್ ಇಂಡಿಯಾ ಆಡಲಿದ್ದು, ವಿರಾಟ್ ಕೊಹ್ಲಿ ತಂಡವನ್ನು ಮುನ್ನಡೆಸಲಿದ್ದಾರೆ.

ಜನವರಿ 5 ರಿಂದ ಪಂದ್ಯ ಆರಂಭವಾಗಲಿದ್ದು, ಇದರ ಮಧ್ಯೆ ಕೇಪ್ ಟೌನ್ ನಲ್ಲಿ ವಿರಾಟ್ ಹಾಗೂ ಅನುಷ್ಕಾ ಆರಾಮಾಗಿ ಕಾಲ ಕಳೆಯುತ್ತಿದ್ದಾರೆ. ಹೊಸ ವರ್ಷಾಚರಣೆ ಹಾಗೂ ಪತ್ನಿ ಟ್ವಿಂಕಲ್ ಖನ್ನಾರ ಹುಟ್ಟುಹಬ್ಬದ ಆಚರಣೆಗಾಗಿ ನಟ ಅಕ್ಷಯ್ ಕುಮಾರ್ ಕೇಪ್ ಟೌನ್ ಗೆ ಕುಟುಂಬ ಸಮೇತರಾಗಿ ತೆರಳಿದ್ದು, ಅಕ್ಷಯ್ ಕುಮಾರ್ ರನ್ನು ಭೇಟಿಯಾದ ವಿರುಷ್ಕಾ ದಂಪತಿ ಅವರೊಂದಿಗೆ ಔತಣಕೂಟ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...