alex Certify
ಕನ್ನಡ ದುನಿಯಾ       Mobile App
       

Kannada Duniya

ಹಾಲಿಡೇ ಮುಗಿಸಿ ಬಂದ ಸ್ಟಾರ್ ಜೋಡಿ

virat-anushka

ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ಜೋಡಿ ಎಲ್ಲರ ಹಾಟ್ ಫೇವರಿಟ್. ಇಬ್ರೂ ಉತ್ತರಾಖಂಡ್ ನಲ್ಲಿ ರಜೆಯ ಮಜಾ ಅನುಭವಿಸಿ ವಾಪಸ್ಸಾಗಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿ ಬಳಿಕ ಟೀಂ ಇಂಡಿಯಾಕ್ಕೆ 25 ದಿನಗಳ ಸುದೀರ್ಘ ವಿಶ್ರಾಂತಿ ಸಿಕ್ಕಿದೆ. ಈ ಬ್ರೇಕ್ ನಲ್ಲಿ ವಿರಾಟ್ ತಮ್ಮ ಪ್ರೇಯಸಿ ಜೊತೆ ಉತ್ತರಾಖಂಡದ ಗಿರಿಧಾಮಗಳಲ್ಲಿ, ಹಚ್ಚ ಹಸಿರಿನ ನಡುವೆ ಸಮಯ ಕಳೆದಿದ್ದಾರೆ.

ತಮ್ಮ ಬ್ಯುಸಿ ಸಿನಿಮಾ ಶೂಟಿಂಗ್ ಶೆಡ್ಯೂಲ್ ನಡುವೆಯೂ ಅನುಷ್ಕಾ, ಕೊಹ್ಲಿಗಾಗಿ ಬಿಡುವು ಮಾಡಿಕೊಂಡಿದ್ರು. ಇಬ್ರೂ ಜೋಡಿಯಾಗಿ ಉತ್ತರಾಖಂಡವನ್ನೆಲ್ಲ ಸುತ್ತಾಡಿದ್ದಾರೆ, ಡೆಹ್ರಾಡೂನ್ ಏರ್ಪೋರ್ಟ್ ನಲ್ಲಿ ವಿನುಷ್ಕಾ ಜೋಡಿ ಮಾಧ್ಯಮಗಳ ಕಣ್ಣಿಗೆ ಬಿದ್ದಿದೆ.

anu

ಅನುಷ್ಕಾ ಸಹೋದರ ಕರ್ಣೇಶ್ ಕೂಡ ಜೊತೆಯಲ್ಲಿದ್ರು. ವಿರಾಟ್, ಅನುಷ್ಕಾ ಹೆಗಲ ಮೇಲೆ ಕೈಹಾಕಿಕೊಂಡು ಏರ್ ಪೋರ್ಟ್ ನಲ್ಲಿ ನಿಂತಿರೋ ಫೋಟೋ ವೈರಲ್ ಆಗಿದೆ.

ಮೂಲಗಳ ಪ್ರಕಾರ ಹೊಸ ವರ್ಷಾಚರಣೆಗೆ ವಿರಾಟ್ ಹಾಗೂ ಅನುಷ್ಕಾರ ಕುಟುಂಬದವರು ಕೂಡ ಆಗಮಿಸಿದ್ರು. ಜನವರಿ 1 ರಂದು ಇಬ್ರೂ ಎಂಗೇಜ್ ಆಗ್ತಿದ್ದಾರೆ ಅನ್ನೋ ಸುದ್ದಿ ಕೂಡ ಇತ್ತು, ಆದ್ರೆ ಖುದ್ದು ವಿರಾಟ್ ಈ ವಿಷಯವನ್ನು ಅಲ್ಲಗಳೆದಿದ್ರು. ನಿಶ್ಚಿತಾರ್ಥ ಮಾಡಿಕೊಳ್ಳೋದಾದ್ರೆ ಎಲ್ರಿಗೂ ಹೇಳ್ತೀವಿ ಅಂತಾನೂ ಟ್ವೀಟ್ ಮಾಡಿದ್ರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...