alex Certify
ಕನ್ನಡ ದುನಿಯಾ       Mobile App
       

Kannada Duniya

ಗೆಳತಿಯೊಂದಿಗೆ ಕದ್ದು ಮುಚ್ಚಿ ಓಡಾಡ್ತಿದಾರೆ ವಿರಾಟ್ ಕೊಹ್ಲಿ

viru

ಮುಂಬೈ: ಭಾರತ ಕ್ರಿಕೆಟ್ ತಂಡದ ಸ್ಪೋಟಕ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ, ಇಂಡಿಯನ್ ಪ್ರೀಮಿಯರ್ ಲೀಗ್ 9ನೇ ಆವೃತ್ತಿಯಲ್ಲಿ ಭರ್ಜರಿ ಪ್ರದರ್ಶನ ನೀಡಿದ್ದು, ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಟೂರ್ನಿಯ ನಂತರ ಅವರು ಮುಂಬೈನಲ್ಲೇ ಉಳಿದುಕೊಂಡಿದ್ದಾರೆ.

ಮುಂಬೈನಲ್ಲಿ ಬೀಡುಬಿಟ್ಟಿರುವ ಕೊಹ್ಲಿ ರಿಲ್ಯಾಕ್ಸ್ ಮೂಡ್ ನಲ್ಲಿದ್ದಾರೆ. ಈ ನಡುವೆ ದೂರವಾಗಿದ್ದ ಗೆಳತಿ ಅನುಷ್ಕಾ ಶರ್ಮಾ ಕೂಡ ‘ಸುಲ್ತಾನ್’ ಶೂಟಿಂಗ್ ಮುಗಿಸಿ ಮುಂಬೈನಲ್ಲಿ ರಿಲ್ಯಾಕ್ಸ್ ಪಡೆದುಕೊಳ್ಳುತ್ತಿದ್ದು, ಇಬ್ಬರೂ ಮತ್ತೆ ಲವ್ ನಲ್ಲಿ ಬಿದ್ದಿದ್ದಾರೆ. ದುಡುಕಿನ ನಿರ್ಧಾರದಿಂದಾಗಿ ಬೇರೆಯಾಗಬೇಕಾಗಿದ್ದ ಈ ಜೋಡಿ ಮತ್ತೆ ಒಂದಾಗಿದ್ದು, ಮುಂಬೈನಲ್ಲಿ ಕದ್ದುಮುಚ್ಚಿ ಓಡಾಡುತ್ತಿದ್ದಾರೆ. ಇಬ್ಬರೂ ಮತ್ತೆ ಲವ್ ಟ್ರ್ಯಾಕ್ ನಲ್ಲಿ ಓಡುತ್ತಿದ್ದಾರೆ ಎನ್ನಲಾಗಿದೆ.

ಜೊತೆಯಾಗಿದ್ದ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಮತ್ತೆ ಒಂದಾಗಲು ತೀರ್ಮಾನಿಸಿದ್ದು, ಇಬ್ಬರೂ ಜೊತೆಯಾಗಿಯೇ ಮುಂಬೈನಲ್ಲಿ ಸುತ್ತಾಡುತ್ತಿದ್ದಾರೆ. ಈ ಮೂಲಕ ಇವರಿಬ್ಬರ ಬಾಳಲ್ಲಿ ಹೊಸಗಾಳಿ ಬೀಸಿದ್ದು, ಅಭಿಮಾನಿಗಳಲ್ಲಿ ಖುಷಿ ತಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...