alex Certify
ಕನ್ನಡ ದುನಿಯಾ       Mobile App
       

Kannada Duniya

ವಿರಾಟ್-ಅನುಷ್ಕಾ ಬ್ರೇಕ್ ಅಪ್ ಗೆ ಕಾರಣ ಏನು ಗೊತ್ತಾ..?

anushka-virat-61-580x395

ಆಗಾಗ ಸುದ್ದಿ ಮಾಡ್ತಿದ್ದ ಕ್ರಿಕೆಟಿಗ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಮತ್ತೆ ಚರ್ಚೆಯಲ್ಲಿದ್ದಾರೆ. ಆಗ ಪ್ರೀತಿ, ಪ್ರೇಮ ಅಂತಾ ಸುದ್ದಿಯಾಗಿದ್ದರು. ಆದ್ರೀಗ ಈ ಹಾಟ್ ಜೋಡಿ ಬೇರೆಯಾಗಿದ್ದಾರೆ. ಅನುಷ್ಕಾ- ವಿರಾಟ್ ಜೋಡಿ ಬೇರೆಯಾಗಿರುವುದು ನಿಮಗೆಲ್ಲ ಗೊತ್ತು. ಕಾರಣ ಏನು ಅಂತಾ ನಾವು ಹೇಳ್ತೀವಿ ಕೇಳಿ.

ಪಾಪ ನಮ್ಮ ಹುಡುಗ ವಿರಾಟ್ ಕೊಹ್ಲಿ ಇನ್ನು ಎಷ್ಟು ವರ್ಷ ಮರ ಸುತ್ತುತ್ತಾನೆ. ಮದುವೆ ಆಗೋಣ ಬಾ ಅಂತಾ ಪ್ರೇಯಸಿ ಅನುಷ್ಕಾಗೆ ಹೇಳಿದ್ದಾನೆ. ಆಕೆ ಇಷ್ಟು ಬೇಗ ಬೇಡ. ನನಗೆ ನನ್ನ ವೃತ್ತಿ ಮುಖ್ಯ ಎಂದಿದ್ದಾಳೆ. ಅಷ್ಟೇ, ಬೆಚ್ಚಗಿದ್ದ ಜೋಡಿ ಬೇರೆಯಾಗಲು ಕಾರಣವಾಗಿದೆ.anushka-virat-131

ಸದ್ಯ ‘ಸುಲ್ತಾನ್’ ಚಿತ್ರಕ್ಕೆ ಸಹಿ ಮಾಡಿರುವ ಅನುಷ್ಕಾ, ಸಲ್ಮಾನ್ ಜೊತೆ ಶೂಟಿಂಗ್ ನಲ್ಲಿ ಬ್ಯುಸಿಯಿದ್ದಾಳೆ. ಹಾಗಾಗಿ 2017ರವರೆಗೆ ನಾನು ಮದುವೆಯಾಗಲ್ಲ. ನನಗೆ ವೃತ್ತಿ ಮುಖ್ಯ ಎಂದಿದ್ದಾಳಂತೆ ಅನುಷ್ಕಾ.

2013ರಲ್ಲಿ ಆ್ಯಡ್ ಶೂಟ್ ಒಂದರಲ್ಲಿ ಅನುಷ್ಕಾ ಹಾಗೂ ಕೊಹ್ಲಿ ಭೇಟಿಯಾಗಿದ್ದರು. ನಂತರ ಇಬ್ಬರ ನಡುವೆ ಪ್ರೀತಿ ಚಿಗುರಿತು. ತಾವಿಬ್ಬರು ಪ್ರೇಮಿಗಳು ಎಂದು ಬಹಿರಂಗವಾಗಿ ಹೇಳಿಕೊಂಡಿದ್ದರು ಈ ಜೋಡಿ. ಅಷ್ಟೇ ಅಲ್ಲ, 2015ರಲ್ಲಿ ಮದುವೆಯಾಗ್ತಾರೆ ಎನ್ನುವ ಸುದ್ದಿ ಕೂಡ ಹರಡಿತ್ತು. ಆದ್ರೀಗ ಬೇರೆಯಾದ ಸುದ್ದಿ ಹೊರಬಿದ್ದಿದೆ. ಅದಕ್ಕೆ ಕಾರಣ ಮದುವೆ ಎನ್ನುವುದೂ ಬಹಿರಂಗವಾಗಿದೆ. ಆದ್ರೆ ಈ ಬಗ್ಗೆ ಕೊಹ್ಲಿ, ಅನುಷ್ಕಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...