alex Certify
ಕನ್ನಡ ದುನಿಯಾ       Mobile App
       

Kannada Duniya

ಅನು ಜೊತೆ ಪ್ರೇಮಿಗಳ ದಿನ ಆಚರಿಸಿಕೊಳ್ಳಲಿದ್ದಾರಾ ಕೊಹ್ಲಿ..?

virat-anushka-1

ವಿರಾಟ್ ಕೊಹ್ಲಿ ಹೃದಯ ಈಗಲೂ ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾಳಿಗಾಗಿ ಮಿಡಿತಾ ಇದೆಯಂತೆ. ಅನುಷ್ಕಾ ಜೊತೆ ಮತ್ತೊಮ್ಮೆ ಮಾತುಕತೆ ನಡೆಸಿ ಎಲ್ಲವನ್ನೂ ಸರಿಪಡಿಸಿಕೊಳ್ಳುವ ಆತುರದಲ್ಲಿದ್ದಾರೆ ಕೊಹ್ಲಿ. ಪ್ರೇಮಿಗಳ ದಿನವನ್ನು ಅನುಷ್ಕಾ ಜೊತೆ ಆಚರಿಸಿಕೊಳ್ಳಲು ವಿರಾಟ್ ಇಚ್ಛಿಸಿದ್ದಾರಂತೆ.

ವರದಿಯೊಂದರ ಪ್ರಕಾರ ಅನುಷ್ಕಾ ಜೊತೆ ಕೂಡಿ ಬಾಳುವ ಆಸೆಯನ್ನು ವಿರಾಟ್ ಹೊಂದಿದ್ದಾರಂತೆ. ಆದಷ್ಟು ಬೇಗ ಅನುಷ್ಕಾ ಜೊತೆ ಸಪ್ತಪದಿ ತುಳಿಯುವ ಆಸೆ ಕೊಹ್ಲಿಯದ್ದು. ಆದ್ರೆ ಅನುಷ್ಕಾ ಮಾತ್ರ ಇಷ್ಟು ಬೇಗ ಮದುವೆ ಬೇಡ ಎಂದಿದ್ದಾಳೆ. ಇದೇ, ಜೋಡಿ ದೂರವಾಗಲು ಕಾರಣವಾಗಿದೆ.

ಈಗಾಗಲೇ ತಮ್ಮ ಆಪ್ತ ಸ್ನೇಹಿತರ ಜೊತೆ ವಿರಾಟ್ ಕೊಹ್ಲಿ, ಅನುಷ್ಕಾಗೆ ಸಂದೇಶ ರವಾನಿಸಿದ್ದಾರೆ. ಪ್ರೇಮಿಗಳ ದಿನವನ್ನು ಒಟ್ಟಿಗೆ ಆಚರಿಸುವಂತೆ ಹಾಗೂ ಇನ್ನೊಮ್ಮೆ ಮಾತುಕತೆ ನಡೆಸುವ ಬಗ್ಗೆ ಅಭಿಪ್ರಾಯ ಮುಂದಿಟ್ಟಿದ್ದಾರೆ. ಕೊಹ್ಲಿ ಬೇಡಿಕೆಯನ್ನು ಅನುಷ್ಕಾ ಸಂಪೂರ್ಣವಾಗಿ ತಿರಸ್ಕರಿಸಿಲ್ಲ. ಆದ್ರೆ ‘ಸುಲ್ತಾನ್’ ಚಿತ್ರದ ಶೂಟಿಂಗ್ ನೆಪ ಹೇಳಿದ್ದಾಳೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...