alex Certify
ಕನ್ನಡ ದುನಿಯಾ       Mobile App
       

Kannada Duniya

ಅನುಷ್ಕಾ ಪ್ರೀತಿ ಮರಳಿ ಪಡೆಯಲು ಹೀಗಿದೆ ಕೊಹ್ಲಿ ಪ್ಲಾನ್ !

virat-anush3.20

ಭಾರತ ಕ್ರಿಕೆಟ್ ತಂಡದ ಸ್ಪೋಟಕ ಬ್ಯಾಟ್ಸ್ ಮೆನ್ ವಿರಾಟ್ ಕೊಹ್ಲಿ, ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮ ಲವ್ ಬ್ರೇಕ್ ಅಪ್ ಆಗಿದ್ದು, ನಂತರದಲ್ಲಿ ಇಬ್ಬರೂ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಬ್ಯುಸಿಯಾಗಿದ್ದು ಗೊತ್ತೇ ಇದೆ. ಇದೀಗ ಬಂದಿರುವ ಮಾಹಿತಿಯಂತೆ ಕೊಹ್ಲಿ ಮತ್ತೆ ಅನುಷ್ಕಾ ಪ್ರೀತಿ ಪಡೆಯಲು ಯತ್ನಿಸಿದ್ದಾರೆ.

ಅನುಷ್ಕಾರಿಂದ ದೂರವಾಗಿದ್ದ ಕೊಹ್ಲಿ ಕ್ರಿಕೆಟ್ ಟೂರ್ನಿಯಲ್ಲೂ ಪಾಲ್ಗೊಳ್ಳದೇ ಅಮ್ಮನೊಂದಿಗೆ ದೇವಾಲಯಗಳಿಗೆ ಭೇಟಿ ನೀಡಿದ್ದರು. ಅನುಷ್ಕಾ ‘ಸುಲ್ತಾನ್’ ಚಿತ್ರಕ್ಕಾಗಿ ಕುಸ್ತಿ ಪ್ರಾಕ್ಟೀಸ್ ಮಾಡಿದರು. ಲವ್ ಬ್ರೇಕ್ ಬಳಿಕ ಕೆಲ ದಿನಗಳ ಕಾಲ ಬೇಸರದಲ್ಲಿದ್ದ ಇಬ್ಬರೂ ಮತ್ತೆ ತಮ್ಮ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಈ ಎಲ್ಲಾ ಬೆಳವಣಿಗೆಗಳ ನಂತರ ಕೊಹ್ಲಿ, ಅನುಷ್ಕಾ ಪ್ರೀತಿಯನ್ನು ಮರಳಿ ಪಡೆಯಲು ಸರ್ಕಸ್ ಮಾಡುತ್ತಿದ್ದು, ಅನುಷ್ಕಾ ಸಹೋದರನ ಮೂಲಕ ಪ್ರಯತ್ನ ಮುಂದುವರೆಸಿದ್ದಾರೆ ಎನ್ನಲಾಗಿದೆ.

ಅನುಷ್ಕಾ ಸಹೋದರ ಕರ್ಣೇಶ್ ಕೂಡ ಕ್ರಿಕೆಟ್ ಆಟಗಾರನಾಗಿದ್ದು, ಅವರ ಮೂಲಕವೇ ಕೊಹ್ಲಿಗೆ ಅನುಷ್ಕಾ ಪರಿಚಯವಾಗಿತ್ತು. ಪರಿಚಯ ಸ್ನೇಹ ನಂತರ ಪ್ರೀತಿಗೆ ತಿರುಗಿತ್ತು. ಈಗ ಇಬ್ಬರೂ ಬೇರೆಯಾಗಿದ್ದು, ಕರ್ಣೇಶ್ ಮೂಲಕವೇ ಕೊಹ್ಲಿ ಪ್ರಯತ್ನ ಮುಂದುವರೆಸಿದ್ದಾರೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...