alex Certify
ಕನ್ನಡ ದುನಿಯಾ       Mobile App
       

Kannada Duniya

ಮತ್ತೆ ಒಂದಾಗ್ತಾರಂತೆ ಕೊಹ್ಲಿ, ಅನುಷ್ಕಾ ಶರ್ಮ

viratkohlianushkasharma(5)

ಬಾಲಿವುಡ್ ನಲ್ಲಿ ಗೆಳೆತನವಾಗುವುದು, ಅದೇ ವೇಗದಲ್ಲಿ ಬ್ರೇಕ್ ಅಪ್ ಆಗುವುದು ಹೊಸದೇನಲ್ಲ. ಶೀಘ್ರವೇ ಮದುವೆಯಾಗಲಿದ್ದಾರೆ ಎನ್ನಲಾಗಿದ್ದ ಹಲವಾರು ಜೋಡಿಗಳು ದೂರವಾಗಿವೆ. ಜೊತೆಯಾಗಿಯೇ ಸುತ್ತಾಡಿದ್ದವರು ಸಂಬಂಧವನ್ನೇ ಕಡಿದುಕೊಂಡಿದ್ದಾರೆ. ಇಂತಹ ಹಲವಾರು ಉದಾಹರಣೆಗಳಿವೆ.

ಭಾರತ ಕ್ರಿಕೆಟ್ ತಂಡದ ಭರವಸೆಯ ಆಟಗಾರ ವಿರಾಟ್ ಕೊಹ್ಲಿ, ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮ ಅವರು ಎಲ್ಲ ಕಡೆಯೂ ಜೊತೆಯಾಗಿಯೇ ಕಾಣಿಸಿಕೊಂಡಿದ್ದರು. ಅವರು ಅನ್ಯೋನ್ಯವಾಗಿದ್ದರಿಂದ ಶೀಘ್ರವೇ ಮದುವೆಯಾಗಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಇವರಿಬ್ಬರೂ ದೂರವಾದರು. ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮ ಬೇರೆಯಾಗಿದ್ದು ಅಚ್ಚರಿಗೆ ಕಾರಣವಾಗಿತ್ತು. ಇದರಿಂದ ಬೇಸರಗೊಂಡ ವಿರಾಟ್, ಕ್ರಿಕೆಟ್ ಸರಣಿಗೆ ಹೋಗದೇ ಅಮ್ಮನ ಜೊತೆ ದೇವಾಲಯಗಳ ಭೇಟಿಗೆ ಹೋಗಿದ್ದರು.

ಅನುಷ್ಕಾ ಶರ್ಮ ಕೂಡ ಎಲ್ಲವನ್ನು ಮರೆತು ‘ಸುಲ್ತಾನ್’ ಚಿತ್ರಕ್ಕಾಗಿ ಕುಸ್ತಿ ಕಲಿಯುವುದಲ್ಲಿ ನಿರತರಾಗಿದ್ದರು. ಈಗ ಬಂದಿರುವ ಮಾಹಿತಿ ಪ್ರಕಾರ ಅನುಷ್ಕಾ ಶರ್ಮ ಮತ್ತು ವಿರಾಟ್ ಮತ್ತೆ ಒಂದಾಗಲಿದ್ದಾರೆ. ಇವರಿಬ್ಬರನ್ನು ಒಂದಾಗಿಸಲು ಅನುಷ್ಕಾ ಸಹೋದರ ಪ್ರಯತ್ನ ನಡೆಸಿದ್ದಾರೆ.

ಅನುಷ್ಕಾ ಸಹೋದರ ಕೊಹ್ಲಿ ಫ್ರೆಂಡ್ ಆಗಿದ್ದು, ಆತನಿಂದಲೇ ಅನುಷ್ಕಾ ಪರಿಚಯವಾಗಿತ್ತು. ಪರಿಚಯ ಪ್ರೇಮಕ್ಕೆ ತಿರುಗಿ ಮದುವೆಯ ಹಂತದವರೆಗೂ ಬಂದಿತ್ತಾದರೂ ಕಾರಣಾಂತರದಿಂದ ಸಂಬಂಧ ಮುರಿದುಬಿದ್ದಿತ್ತು. ಇದೀಗ ಅನುಷ್ಕಾ ಸಹೋದರನೇ ಇಬ್ಬರನ್ನೂ ಒಂದು ಮಾಡಲು ಪ್ರಯತ್ನ ನಡೆಸಿದ್ದಾರೆ ಎಂದು ಹೇಳಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...