alex Certify
ಕನ್ನಡ ದುನಿಯಾ       Mobile App
       

Kannada Duniya

ಪಾರ್ಟಿಗಾಗಿ ದೆಹಲಿಯಿಂದ ಮುಂಬೈಗೆ ತೆರಳಿದ ವಿರುಷ್ಕಾ

ರಾಷ್ಟ್ರ ರಾಜಧಾನಿಯಲ್ಲಿ ಅದ್ಧೂರಿ ಆರತಕ್ಷತೆ ನಂತ್ರ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಜೋಡಿ ಮುಂಬೈಗೆ ಪ್ರಯಾಣ ಬೆಳೆಸಿದೆ. ಡಿಸೆಂಬರ್ 26ರಂದು ಮುಂಬೈನಲ್ಲಿ ಜೋಡಿ ತಮ್ಮ ಸ್ನೇಹಿತರಿಗೆ ಭರ್ಜರಿ ಪಾರ್ಟಿ ನೀಡಲಿದ್ದಾರೆ.

ಹೊಸ ಜೋಡಿ ನವದೆಹಲಿಯ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಬೆಳಿಗ್ಗೆ ಕ್ಯಾಮರಾ ಕಣ್ಣಿಗೆ ಬಿದ್ದಿದ್ದಾರೆ. ದೆಹಲಿ ವಿಮಾನ ನಿಲ್ದಾಣಕ್ಕೆ ತುಂಬಾ ಸರಳ ಉಡುಗೆಯಲ್ಲಿ ಬಂದ ಜೋಡಿ ಮುಂಬೈಗೆ ಪ್ರಯಾಣ ಬೆಳೆಸಿದೆ. ಮುಂಬೈನ ಸೇಂಟ್ ರೆಗಿಸ್ ಹೊಟೇಲ್ ನಲ್ಲಿ ಪಾರ್ಟಿ ನಡೆಯಲಿದೆ. ಇದ್ರ ಆಹ್ವಾನ ಪತ್ರಿಕೆ ಕೂಡ ಬಹಿರಂಗವಾಗಿದೆ.

ಈ ಪಾರ್ಟಿಗೆ ಟೀಂ ಇಂಡಿಯಾ ಆಟಗಾರರ ಜೊತೆಗೆ ಬಾಲಿವುಡ್ ಖ್ಯಾತನಾಮರು ಆಗಮಿಸುವ ಸಾಧ್ಯತೆಯಿದೆ. ಶಾರುಕ್ ಖಾನ್, ಅಮಿತಾಬ್ ಬಚ್ಚನ್, ಅಭಿಷೇಕ್ ಬಚ್ಚನ್, ವರುಣ್ ಧವನ್, ಕಪಿಲ್ ಶರ್ಮಾ, ಫರಾನ್ ಅಖ್ತರ್, ಶಾಹಿದ್ ಕಪೂರ್ ಸೇರಿದಂತೆ ಅನೇಕರು ಪಾರ್ಟಿಗೆ ಹಾಜರಾಗಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...