alex Certify
ಕನ್ನಡ ದುನಿಯಾ       Mobile App
       

Kannada Duniya

ಕೊಹ್ಲಿ, ಸ್ಮೃತಿ ಮಂದಣ್ಣ ಇಬ್ಬರಿಗೂ ಲಕ್ಕಿ ಈ ನಂಬರ್

ಭಾರತೀಯ ಕ್ರಿಕೆಟ್ ನಲ್ಲಿ 18 ಲಕ್ಕಿ ನಂಬರ್. ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಭಾರತ ಮಹಿಳಾ ತಂಡದ ಆಟಗಾರ್ತಿ ಸ್ಮೃತಿ ಮಂದಣ್ಣ 18 ಸಂಖ್ಯೆಯ ಜೆರ್ಸಿ ಧರಿಸ್ತಾರೆ. ವಿಶೇಷ ಅಂದ್ರೆ ಒಂದೇ ದಿನ ಇಬ್ಬರೂ ದಕ್ಷಿಣ ಆಫ್ರಿಕಾದಲ್ಲಿ ಸೆಂಚುರಿ ಸಿಡಿಸಿದ್ದಾರೆ.

ಕೇಪ್ ಟೌನ್ ನಲ್ಲಿ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಕೊಹ್ಲಿ, ದಕ್ಷಿಣ ಆಫ್ರಿಕಾ ವಿರುದ್ಧ 34ನೇ ಏಕದಿನ ಶತಕ ಬಾರಿಸಿದ್ದಾರೆ. ಇನ್ನೊಂದೆಡೆ ಭಾರತ ಮಹಿಳಾ ಕ್ರಿಕೆಟ್ ತಂಡ ಹಾಗೂ ದಕ್ಷಿಣ ಆಫ್ರಿಕಾದ ಮಹಿಳಾ ತಂಡದ ನಡುವೆ ಕೂಡ ಅದೇ ದಿನ ಪಂದ್ಯ ನಡೆದಿತ್ತು.

ಆ ಮ್ಯಾಚ್ ನಲ್ಲಿ 18ನೇ ನಂಬರ್ ಜೆರ್ಸಿ ಧರಿಸಿರೋ ಭಾರತದ ಆಟಗಾರ್ತಿ ಸ್ಮೃತಿ ಮಂದಣ್ಣ 129 ಬಾಲ್ ಗಳಲ್ಲಿ 135 ರನ್ ಸಿಡಿಸಿದ್ದಾರೆ. ದಕ್ಷಿಣ ಆಫ್ರಿಕಾವನ್ನು 178 ರನ್ ಗಳಿಂದ ಮಣಿಸುವ ಮೂಲಕ ಭಾರತದ ವನಿತೆಯರು 2-1ರಿಂದ ಸರಣಿ ಗೆದ್ದುಕೊಂಡಿದ್ದಾರೆ. ಹಾಗಾಗಿ ನಂ.18 ಕೊಹ್ಲಿ ಹಾಗೂ ಸ್ಮೃತಿಗೆ ಲಕ್ಕಿ ಅನ್ನೋದ್ರಲ್ಲಿ ಡೌಟೇ ಇಲ್ಲ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...