alex Certify
ಕನ್ನಡ ದುನಿಯಾ       Mobile App
       

Kannada Duniya

6 ತಿಂಗಳಿನಿಂದ ಕ್ರಿಕೆಟಿಗರಿಗೆ ಹಣ ಕೊಟ್ಟಿಲ್ಲ ಬಿಸಿಸಿಐ

match

ಐಸಿಸಿ ಜೊತೆಗೆ ಆದಾಯ ಮತ್ತು ಆಡಳಿತ ರಚನೆಯ ಗುದ್ದಾಟದಲ್ಲಿರುವ ಬಿಸಿಸಿಐ, ಟೀಂ ಇಂಡಿಯಾ ಆಟಗಾರರನ್ನೇ ಮರೆತುಬಿಟ್ಟಿದೆ. ಕಳೆದ 6 ತಿಂಗಳಿನಿಂದ ಕೊಹ್ಲಿ ಪಡೆಗೆ ಬಿಸಿಸಿಐ ಹಣ ಪಾವತಿಸಿಲ್ಲ. 13 ಟೆಸ್ಟ್ ಗಳ ಸುದೀರ್ಘ ಸೀಸನ್ ಮುಗಿದು ತಿಂಗಳುಗಳೇ ಕಳೆದರೂ ಪಂದ್ಯದ ಶುಲ್ಕ ಮಾತ್ರ ಆಟಗಾರರ ಕೈಸೇರಿಲ್ಲ.

ನಿಯಮದ ಪ್ರಕಾರ ಭಾರತ ತಂಡದ ಪ್ರತಿ ಆಟಗಾರನಿಗೂ ಪಂದ್ಯವೊಂದಕ್ಕೆ ಬಿಸಿಸಿಐ 15 ಲಕ್ಷ ರೂಪಾಯಿ ನೀಡಬೇಕು. ಹನ್ನೊಂದರ ಬಳಗದಲ್ಲೇ ಆಡದೇ ಇದ್ದ ಕ್ರಿಕೆಟಿಗರಿಗೆ ಪ್ರತಿ ಪಂದ್ಯಕ್ಕೆ 7 ಲಕ್ಷ ರೂಪಾಯಿ ಶುಲ್ಕ ಪಾವತಿಸಬೇಕು. ಭಾರತ ತಂಡದ ಸದಸ್ಯರಿಗೆ ಕೂಡ ಪ್ರತಿ ಪಂದ್ಯಕ್ಕೂ ತಲಾ 1 ಲಕ್ಷ ರೂಪಾಯಿ ಶುಲ್ಕ ನೀಡಬೇಕು. ಆ ಹಣ ಕೂಡ ಇದುವರೆಗೂ ಆಟಗಾರರಿಗೆ ಸಿಕ್ಕಿಲ್ಲ.

ನ್ಯೂಜಿಲೆಂಡ್, ಇಂಗ್ಲೆಂಡ್, ಬಾಂಗ್ಲಾದೇಶ, ಆಸ್ಟ್ರೇಲಿಯಾ ವಿರುದ್ಧದ ನಾಲ್ಕು ಸರಣಿಗಳು ಮುಗಿದಿವೆ. ಐಪಿಎಲ್ ಕೂಡ ಆರಂಭವಾಗಿದೆ. ಆದ್ರೂ ಆಟಗಾರರಿಗೆ ಹಣ ಸಂದಾಯವಾಗಿಲ್ಲ. ಈ ಹಿಂದೆ ಸರಣಿ ಮುಗಿದು 15 ದಿನಗಳು ಅಥವಾ ತಿಂಗಳೊಳಗೆ ಶುಲ್ಕ ನೀಡಲಾಗುತ್ತಿತ್ತು. ಆದ್ರೆ ಇಷ್ಟೊಂದು ವಿಳಂಬವಾಗಿದ್ಯಾಕೆ ಅನ್ನೋದು ಸ್ಪಷ್ಟವಾಗಿಲ್ಲ ಅಂತಾ ಕ್ರಿಕೆಟಿಗರು ಹೇಳಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...