alex Certify
ಕನ್ನಡ ದುನಿಯಾ       Mobile App
       

Kannada Duniya

ಶೇ.100ರಷ್ಟು ಏರಿಕೆಯಾಗಲಿದೆ ಟೀಂ ಇಂಡಿಯಾ ಆಟಗಾರರ ವೇತನ..?

ವಿರಾಟ್ ಕೊಹ್ಲಿ ನಾಯಕತ್ವದ ಟೀ ಇಂಡಿಯಾಕ್ಕೆ ಸದ್ಯದಲ್ಲೇ ವೇತನ ಪರಿಷ್ಕರಣೆಯಾಗಲಿದೆ. ಮೂಲಗಳ ಮಾಹಿತಿ ಪ್ರಕಾರ ಬಿಸಿಸಿಐ ಶೇ.100 ರಷ್ಟು ವೇತನ ಏರಿಕೆ ಮಾಡಲು ನಿರ್ಧರಿಸಿದೆ. ಹೊಸ ನಿಯಮ ಜಾರಿಯಿಂದ ರಣಜಿ ಆಟಗಾರರಿಗೆ ಕೂಡ ಲಾಭವಾಗಲಿದೆ.

ಸದ್ಯ ಬಿಸಿಸಿಐ 180 ಕೋಟಿ ವೆಚ್ಚ ಮಾಡುತ್ತಿದ್ದು, ಇದಕ್ಕೆ ಇನ್ನು 200 ಕೋಟಿ ರೂಪಾಯಿ ಸೇರಿಸುವ ನಿಟ್ಟಿನಲ್ಲಿ ಸುಪ್ರೀಂ ಕೋರ್ಟ್ ನೇಮಕ ಮಾಡಿರುವ ಆಡಳಿತಗಾರರ ಸಮಿತಿ ಪ್ರಯತ್ನ ನಡೆಸುತ್ತಿದೆ. ಆಟಗಾರರು ವೇತನ ಹೆಚ್ಚಳದ ಬೇಡಿಕೆ ಇಟ್ಟಿರುವುದರಿಂದ ಹೆಚ್ಚುವರಿಯಾಗಿ 200 ಕೋಟಿ ರೂಪಾಯಿ ಹಣದ ಅವಶ್ಯಕತೆ ಇದೆ ಎನ್ನಲಾಗ್ತಿದೆ.

ಆಟಗಾರರ ವೇತನ ಹೆಚ್ಚಳ ಮಾಡುವಂತೆ ವಿರಾಟ್ ಕೊಹ್ಲಿ ಹಾಗೂ ಕೋಚ್ ರವಿಶಾಸ್ತ್ರಿ ಬಿಸಿಸಿಐ ಅನ್ನು ಒತ್ತಾಯಿಸಿದ್ದರು. ಸದ್ಯ ಬಿಸಿಸಿಐನ ಶೇ.26ರಷ್ಟು ಆದಾಯವನ್ನು ಮೂರು ವಿಧದಲ್ಲಿ ವಿಂಗಡಿಸಲಾಗಿದೆ. ಅಂತರಾಷ್ಟ್ರೀಯ ಆಟಗಾರರಿಗೆ ಶೇ.13ರಷ್ಟು ಹಣ, ಡೊಮೆಸ್ಟಿಕ್ ಕ್ರಿಕೆಟರ್ಸ್ ಗಾಗಿ ಶೇ.10.6ರಷ್ಟು ಹಾಗೂ ಉಳಿದ ಹಣವನ್ನು ಮಹಿಳಾ ಕ್ರಿಕೆಟಿಗರಿಗಾಗಿ ಮೀಸಲಿಡಲಾಗಿದೆ.

2017ರಲ್ಲಿ ಕೊಹ್ಲಿ 46 ಪಂದ್ಯಗಳಿಂದ 5.51 ಕೋಟಿ ರೂಪಾಯಿ ಗಳಿಸಿದ್ದಾರೆ. ಮುಂದಿನ ವರ್ಷ 10 ಕೋಟಿಗೂ ಅಧಿಕ ವೇತನ ಪಡೆಯಲಿದ್ದಾರೆ. ರಣಜಿ ಆಟಗಾರ ಸದ್ಯ ವರ್ಷಕ್ಕೆ 12-15 ಲಕ್ಷ ಗಳಿಸುತ್ತಿದ್ದು, ವೇತನ ಪರಿಷ್ಕರಣೆ ಬಳಿಕ 30 ಲಕ್ಷ ರೂಪಾಯಿ ಸಂಭಾವನೆ ಪಡೆಯಲಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...