alex Certify
ಕನ್ನಡ ದುನಿಯಾ       Mobile App
       

Kannada Duniya

ಕ್ಯೂಟ್ ಕಪಲ್ ಡ್ರೆಸ್ಸಿಂಗ್ ಗೆ ಅಭಿಮಾನಿಗಳು ಫಿದಾ

ಸ್ಟಾರ್ ಗಿರಿ ಬಂದ ಮೇಲೆ ಮುಗೀತು….ತಾವು ಹಾಕಿಕೊಳ್ಳುವ ಬಟ್ಟೆಯ ಬಗ್ಗೆ ಸ್ಟಾರ್ಗಳು ಹೆಚ್ಚು ಗಮನ ನೀಡ್ತಾರೆ. ಇದಕ್ಕೆ ಉತ್ತಮ ಉದಾಹರಣೆ ವಿರಾಟ್-ಅನುಷ್ಕಾ ಜೋಡಿ. ಈ ಜೋಡಿ ಯಾವುದೇ ಸಮಾರಂಭದಲ್ಲಿ ಭಾಗವಹಿಸಿದ್ರೂ ಇಬ್ಬರಿಗೂ ಹೊಂದುವ ಹಾಗೂ ಆಕರ್ಷಕ ಬಟ್ಟೆ ಹಾಕಿಕೊಂಡು ಗಮನ ಸೆಳೆಯುತ್ತಾರೆ.

ಇತ್ತೀಚೆಗೆ ಮುಂಬೈನಲ್ಲಿ ವಿರಾಟ್-ಅನುಷ್ಕಾ ಜೋಡಿ ಜಾಹೀರಾತು ಒಂದರ ಶೂಟಿಂಗ್ ನಲ್ಲಿ ಭಾಗವಹಿಸಿತ್ತು. ಈ ವೇಳೆ ಅನುಷ್ಕಾ ಕ್ರೀಮ್ ಬಣ್ಣದ ಭಾರೀ ಕಸೂತಿ ಕೆಲಸ ಇರೋ ಉಡುಗೆಯನ್ನು ತೊಟ್ಟು ಗಮನ ಸೆಳೆದ್ರು. ಇನ್ನು ವಿರಾಟ್ ನೀಲಿ ಬಣ್ಣದ ಶೇರವಾನಿ ತೊಟ್ಟು, ಕ್ರೀಮ್ ಬಣ್ಣದ ಪ್ಯಾಂಟ್ ಹಾಕಿಕೊಂಡು ಶೂಟಿಂಗ್ ಗೆ ಹೊರಟ ದೃಶ್ಯ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದೆ. ಇನ್ನು ಈ ತಾರಾಜೋಡಿ ವಸ್ತ್ರ ವಿನ್ಯಾಸಕ್ಕೆ ಸಂಬಂಧಿಸಿದ ಜಾಹೀರಾತಿನಲ್ಲಿ ಭಾಗವಹಿಸಿದ್ದರೆಂದು ಹೇಳಲಾಗಿದೆ.

ಈ ತಾರಾ ಜೋಡಿ ತಮ್ಮ ಮದುವೆ ಸಮಾರಂಭದಲ್ಲಿ ತೊಟ್ಟ ಉಡುಗೆ ಎಲ್ಲರ ಗಮನ ಸೆಳೆದಿತ್ತು. ಒಮ್ಮೆ ಅನುಷ್ಕಾ, ವಿರಾಟ್ ತೊಟ್ಟಿದ್ದ ಶರ್ಟ್ ತೊಟ್ಟು ಕ್ಯಾಮೆರಾ ಕಣ್ಣಿಗೂ ಬಿದ್ದಿದ್ದರು.

ಸೆಲಬ್ರೆಟಿ ಜೋಡಿ ವಾತಾವರಣ ಹಾಗೂ ಸಮಯಕ್ಕೆ ಅನುಸಾರವಾಗಿ ಉಡುಗೆ ತೊಟ್ಟು ಗಮನ ಸೆಳೆದಿದ್ದಾರೆ. ಪ್ರಶಸ್ತಿ ಸಮಾರಂಭದಲ್ಲಿ ವಿರಾಟ್-ಅನುಷ್ಕಾ ಜೋಡಿ ತೊಟ್ಟ ಉಡುಗೆಗೆ ಅಭಿಮಾನಿಗಳು ಫಿದಾ ಆಗಿದ್ರು. ಜಾಹೀರಾತು ಒಂದರಲ್ಲಿ ಈ ಜೋಡಿ ಮದುವೆಯ ಉಡುಗೆಯಲ್ಲಿ ಕಾಣಿಸಿಕೊಂಡು ಅಭಿಮಾನಿಗಳನ್ನು ಸೆಳೆದಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...