alex Certify
ಕನ್ನಡ ದುನಿಯಾ       Mobile App
       

Kannada Duniya

ಸ್ಲಿಪ್ ಡಿಸ್ಕ್ ಸಮಸ್ಯೆಯಿಂದ ಬಳಲ್ತಿದ್ದಾರೆ ಕೊಹ್ಲಿ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ವೈದ್ಯರು ವಿಶ್ರಾಂತಿ ಪಡೆಯುವಂತೆ ಸಲಹೆ ನೀಡಿದ್ದಾರೆ. ಕೊಹ್ಲಿ ಸ್ಲಿಪ್ ಡಿಸ್ಕ್ ನಿಂದ ಬಳಲುತ್ತಿದ್ದಾರಂತೆ. ಬುಧವಾರ ಮುಂಬೈನ ಇಂದೂಜಾ ಆಸ್ಪತ್ರೆಗೆ ತೆರಳಿದ್ದ ಕೊಹ್ಲಿ, ವೈದ್ಯಕೀಯ ಪರೀಕ್ಷೆಗೊಳಗಾಗಿದ್ದರು.

ಪರೀಕ್ಷೆ ನಡೆಸಿದ ವೈದ್ಯರು, ಇಂಗ್ಲೆಂಡ್ ನಲ್ಲಿ ಕೌಂಟಿ ಆಡದಂತೆ ಸಲಹೆ ನೀಡಿದ್ದಾರೆ ಎನ್ನಲಾಗಿದೆ. ವಿಶ್ವದ ಅತ್ಯಂತ ಫಿಟ್ ಆಟಗಾರರ ಪಟ್ಟಿಯಲ್ಲಿರುವ ಕೊಹ್ಲಿ, ದಕ್ಷಿಣ ಆಫ್ರಿಕಾ ಪ್ರವಾಸದ ವೇಳೆಯೂ ಒಂದು ಪಂದ್ಯದಲ್ಲಿ ವಿಶ್ರಾಂತಿ ಪಡೆದಿದ್ದರು. ಈಗ ಮತ್ತೆ ಪರೀಕ್ಷೆ ನಡೆಸಿದ ವೈದ್ಯರು, ವಿಶ್ರಾಂತಿಯ ಸಲಹೆ ನೀಡಿದ್ದಾರೆ.

ಬಿಸಿಸಿಐ ವೈದ್ಯಕೀಯ ತಂಡದ ಸಲಹೆ ನಂತ್ರ ಕೊಹ್ಲಿ ಮುಂದಿನ ನಿರ್ಧಾರ ಕೈಗೊಳ್ಳಲಿದ್ದಾರೆ. ಐಪಿಎಲ್ ನಂತ್ರ ಕೊಹ್ಲಿ ಕೌಂಟಿ ಆಡಲಿದ್ದರು. ಇದಾದ ನಂತ್ರ ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸಕ್ಕೆ ಕೊಹ್ಲಿ ತೆರಳಲಿದ್ದಾರೆ. ವಿರಾಟ್ ಕೊಹ್ಲಿ ಅಫ್ಘಾನಿಸ್ತಾನ ಟೆಸ್ಟ್ ಕ್ರಿಕೆಟ್ ಬದಲು ಕೌಂಟಿ ಕ್ರಿಕೆಟ್ ಗೆ ಹೆಚ್ಚು ಪ್ರಾಮುಖ್ಯತೆ ನೀಡಿದ್ದರು. ಆದ್ರೆ ಸ್ಲಿಪ್ ಡಿಸ್ಕ್, ಕೌಂಟಿ ಕ್ರಿಕೆಟ್ ಗೆ ಅಡ್ಡಿಯಾಗುವ ಸಾಧ್ಯತೆಯಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...