alex Certify
ಕನ್ನಡ ದುನಿಯಾ       Mobile App
       

Kannada Duniya

ಟೀಂ ಇಂಡಿಯಾ ಅಭ್ಯಾಸ ಪಂದ್ಯದ ವೇಳೆ ನಡೆಯಿತು ಅಚಾತುರ್ಯ

ಸತತ ಗೆಲುವಿನಿಂದ ಯಶಸ್ಸಿನ ಅಲೆಯಲ್ಲಿ ತೇಲುತ್ತಿರುವ ಟೀಂ ಇಂಡಿಯಾ, ಶ್ರೀಲಂಕಾ ವಿರುದ್ದದ ಪಂದ್ಯಗಳಲ್ಲಿಯೂ ಗೆಲುವು ಸಾಧಿಸಲು ಭರ್ಜರಿ ತಯಾರಿ ನಡೆಸಿದೆ. ಶ್ರೀಲಂಕಾ ವಿರುದ್ದ ಪ್ರಥಮ ಟೆಸ್ಟ್ ಪಂದ್ಯ ಕೋಲ್ಕತ್ತಾದಲ್ಲಿ ನಡೆಯಲಿದ್ದು, ಉಭಯ ತಂಡಗಳು ಈಗಾಗಲೇ ಕೋಲ್ಕತ್ತಾಕ್ಕೆ ಆಗಮಿಸಿವೆ.

ಮಂಗಳವಾರದಂದು ಟೀಂ ಇಂಡಿಯಾ ಈಡನ್ ಗಾರ್ಡನ್ ಮೈದಾನದಲ್ಲಿ ಅಭ್ಯಾಸ ನಡೆಸುವ ವೇಳೆ ಅಚಾತುರ್ಯವೊಂದು ನಡೆದಿದೆ. ವೇಗ ಮಹಮ್ಮದ್ ಶಮಿ ಅವರ ಎಸೆತವೊಂದನ್ನು ನೆಟ್ಸ್ ನಲ್ಲಿ ಆಡುತ್ತಿದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಆಡದೇ ಬಿಟ್ಟಾಗ ಹಿಂಭಾಗದಲ್ಲಿದ್ದ ವಾಹಿನಿಯೊಂದರ ಕ್ಯಾಮರಾಮನ್ ಗೆ ಚೆಂಡು ಬಡಿದಿದೆ.

ಟೀಂ ಇಂಡಿಯಾ ಅಭ್ಯಾಸ ಪಂದ್ಯವನ್ನು ಕ್ಯಾಮರಾಮನ್ ಚಿತ್ರೀಕರಿಸುತ್ತಿದ್ದ ವೇಳೆ ಈ ಘಟನೆ ನಡೆದಿದ್ದು, ಕೂಡಲೇ ಅವರ ಸಹಾಯಕ್ಕೆ ಧಾವಿಸಿದ ವಿರಾಟ್ ಕೊಹ್ಲಿ, ಕೂಡಲೇ ಟೀಂ ಇಂಡಿಯಾ ಫಿಸಿಯೋ ಪ್ಯಾಟ್ರಿಕ್ ಫರ್ಹಾರ್ಟ್ ರನ್ನು ಕರೆಸಿಕೊಂಡು ಕ್ಯಾಮರಾಮನ್ ಗೆ ಚಿಕಿತ್ಸೆ ಕೊಡಿಸಿದ್ದಾರೆ. ಕ್ಯಾಮರಾಮನ್ ಚೇತರಿಸಿಕೊಳ್ಳುವವರೆಗೂ ಸ್ಥಳದಲ್ಲಿದ್ದ ವಿರಾಟ್ ಕೊಹ್ಲಿ ಬಳಿಕ ಅಭ್ಯಾಸಕ್ಕೆ ತೆರಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ರಿಯಲ್ ಸ್ಟಾರ್ ಉಪೇಂದ್ರರ ಕರ್ನಾಟಕ ಪ್ರಜ್ಞಾವಂತ ಜನತಾ ಪಾರ್ಟಿಗೆ ಜನ ಬೆಂಬಲ ಸಿಗಲಿದೆಯೇ..?

    View Results

    Loading ... Loading ...