alex Certify
ಕನ್ನಡ ದುನಿಯಾ       Mobile App
       

Kannada Duniya

ಕೊಹ್ಲಿ ಆಟ ನನ್ನತ್ರ ನಡೆಯಲ್ಲ ಎಂದ ಪಾಕ್ ಬೌಲರ್

j-kan-a

ನವದೆಹಲಿ: ಚಾಂಪಿಯನ್ಸ್ ಟ್ರೋಫಿಯಲ್ಲಿ ಕ್ರಿಕೆಟ್ ಲೋಕದ ಬದ್ಧ ಎದುರಾಳಿಗಳಾದ ಟೀಂ ಇಂಡಿಯಾ ಮತ್ತು ಪಾಕಿಸ್ತಾನ ಮುಖಾಮುಖಿಯಾಗಲಿವೆ.

ಆದರೆ, ಪಂದ್ಯ ಆರಂಭಕ್ಕೂ ಮೊದಲೇ ಪಾಕ್ ಬೌಲರ್ ಜುನೇದ್ ಖಾನ್ ಮೈಂಡ್ ಗೇಮ್ ಶುರು ಮಾಡಿದ್ದಾರೆ.

ವಿರಾಟ್ ಕೊಹ್ಲಿ ಶ್ರೇಷ್ಟ ಆಟಗಾರ ನಿಜ. ಆದರೆ, ನನ್ನ ಬಳಿ ಮಾತ್ರ ಕೊಹ್ಲಿ ಆಟ ನಡೆಯಲ್ಲ ಎಂದು ಹೇಳಿದ್ದಾರೆ.

ಕೊಹ್ಲಿಗೆ ಬೌಲಿಂಗ್ ಮಾಡಿದ 4 ಪಂದ್ಯಗಳಲ್ಲಿ 3 ಸಲ ಅವರನ್ನು ಔಟ್ ಮಾಡಿದ್ದೇನೆ. ಮುಂದಿನ ಪಂದ್ಯದಲ್ಲಿಯೂ ಅವರ ವಿಕೆಟ್ ಪಡೆಯುತ್ತೇನೆ ಎಂದು ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

ಕೊಹ್ಲಿ ಶ್ರೇಷ್ಟ ಆಟಗಾರ. ಅವರು ಎಲ್ಲಾ ಬೌಲರ್ ಗಳ ಎದುರು ಉತ್ತಮ ಪ್ರದರ್ಶನ ನೀಡಿದ್ದಾರೆ. ಆದರೆ ಅವರು ಎಂದೂ ನನ್ನ ಎದುರು ಉತ್ತಮ ಪ್ರದರ್ಶನ ನೀಡಿಲ್ಲ ಎಂದು ಜುನೇದ್ ಖಾನ್ ಹೇಳಿದ್ದಾರೆ.

ಇದಕ್ಕೆ ಕೊಹ್ಲಿ ಬ್ಯಾಟ್ ಮೂಲಕವೇ ಉತ್ತರ ನೀಡಲಿದ್ದಾರೆಯೇ ಎಂಬುದನ್ನು ಕಾದು ನೋಡಬೇಕಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...