alex Certify
ಕನ್ನಡ ದುನಿಯಾ       Mobile App
       

Kannada Duniya

ಮೊದಲ ಬಾರಿ ವ್ಯರ್ಥವಾಯ್ತು ಕೊಹ್ಲಿ ಶತಕ

ನ್ಯೂಜಿಲೆಂಡ್ ವಿರುದ್ಧ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ 6 ವಿಕೆಟ್ ಗಳಿಂದ ಸೋಲುಂಡಿದೆ. ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಶತಕ ಬಾರಿಸಿದ ನಂತ್ರವೂ ಟೀಂ ಇಂಡಿಯಾ ತವರಲ್ಲಿ ಸೋತ ಮೊದಲ ಪಂದ್ಯ ಇದಾಗಿದೆ.

ವಿರಾಟ್ ಕೊಹ್ಲಿ ತಮ್ಮ 200ನೇ ಏಕದಿನ ಪಂದ್ಯದಲ್ಲಿ 31ನೇ ಶತಕ ಬಾರಿಸಿದ್ದಾರೆ. ತವರು ನೆಲದಲ್ಲಿ  ವಿರಾಟ್ ಸಿಡಿಸಿದ 13ನೇ ಶತಕ ಇದಾಗಿದೆ. ವಿರಾಟ್ ಕೊಹ್ಲಿ ಶತಕ ಸಿಡಿಸಿದ ಹಿಂದಿನ ಎಲ್ಲ 12 ಪಂದ್ಯದಲ್ಲಿಯೂ ಭಾರತ ಗೆಲುವು ಸಾಧಿಸಿತ್ತು. ಆದ್ರೆ ನ್ಯೂಜಿಲೆಂಡ್ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿಯೇ ವಿರಾಟ್ ಶತಕ ವ್ಯರ್ಥವಾಯ್ತು. ಭಾರತ ಸೋಲಿನ ಮುಖ ನೋಡಬೇಕಾಯ್ತು.

ಡಿಸೆಂಬರ್ 24,2009 ರಲ್ಲಿ ಶ್ರೀಲಂಕಾ ವಿರುದ್ಧ ಈಡನ್ ಗಾರ್ಡನ್ ನಲ್ಲಿ ನಡೆದ ಪಂದ್ಯದಲ್ಲಿ ಕೊಹ್ಲಿ 107 ರನ್ ಕಲೆ ಹಾಕಿದ್ದರು. ಆಗ ಭಾರತ ಗೆಲುವು ಸಾಧಿಸಿತ್ತು.

ನವೆಂಬರ್ 28,2010 ರಲ್ಲಿ ನ್ಯೂಜಿಲೆಂಡ್ ವಿರುದ್ಧ ಗೌಹಾಟಿಯಲ್ಲಿ ಕೊಹ್ಲಿ 105 ರನ್ ಗಳಿಸಿದ್ದರು. ಆಗ್ಲೂ ಟೀಂ ಇಂಡಿಯಾ ಜಯಭೇರಿ ಬಾರಿಸಿತ್ತು.

ಅಕ್ಟೋಬರ್ 17,2011 ರಲ್ಲಿ ಇಂಗ್ಲೆಂಡ್ ವಿರುದ್ಧ ದೆಹಲಿಯಲ್ಲಿ ನಡೆದ ಪಂದ್ಯದಲ್ಲಿ ಕೊಹ್ಲಿ 112 ರನ್ ಕಲೆ ಹಾಕಿ ಗೆಲುವಿಗೆ ಕಾರಣರಾಗಿದ್ದರು.

ಡಿಸೆಂಬರ್ 2,2011 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ವಿಶಾಖಪಟ್ಟಣಂನಲ್ಲಿ ನಡೆದ ಪಂದ್ಯದಲ್ಲಿ ಕೊಹ್ಲಿ 117 ರನ್ ಗಳಿಸಿದ್ದರು.

ಅಕ್ಟೋಬರ್ 30,2013, ನವೆಂಬರ್ 16, 2014, ಅಕ್ಟೋಬರ್ 22, 2015, ಅಕ್ಟೋಬರ್ 23, 2016, ಜನವರಿ 15, 2017ನಲ್ಲಿ ತವರಿನ ಬೇರೆ ಬೇರೆ ಮೈದಾನದಲ್ಲಿ ನಡೆದ ಪಂದ್ಯಗಳಲ್ಲಿ ಶತಕ ಸಿಡಿಸಿ ಭಾರತದ ಗೆಲುವಿಗೆ ಕಾರಣರಾಗಿದ್ದರು. ಆದ್ರೆ ಇದೇ ಮೊದಲ ಬಾರಿ ಕೊಹ್ಲಿ ಶತಕ ಸಿಡಿಸಿದ್ರೂ ಭಾರತ ಗೆಲುವು ಕಾಣಲಿಲ್ಲ.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...