alex Certify
ಕನ್ನಡ ದುನಿಯಾ       Mobile App
       

Kannada Duniya

ಅಡಿಲೇಡ್ ಓವಲ್ ಮೈದಾನದಲ್ಲಿ ಮದುವೆ ಆಗುವಂತೆ ಕೊಹ್ಲಿಗೆ ಆಹ್ವಾನ

ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ಬೆಡಗಿ ಅನುಷ್ಕಾ ಶರ್ಮಾ ಮದುವೆ ವಿಷ್ಯ ಸದ್ಯ ಸುದ್ದಿಯಲ್ಲಿದೆ. ಕೊಹ್ಲಿ-ಅನುಷ್ಕಾ ಮದುವೆಯಾಗ್ತಾರಂತೆ ಎಂಬುದು ಎಲ್ಲರ ಬಾಯಲ್ಲಿ ಹರಿದಾಡ್ತಿದೆ. ಈ ಮಧ್ಯೆ ಕೊಹ್ಲಿಗೆ ಅದೃಷ್ಟದ ಮೈದಾನವೆಂದೇ ಪರಿಗಣಿಸಲಾಗಿರುವ ಆಸ್ಟ್ರೇಲಿಯಾದ ಅಡಿಲೇಡ್ ಓವಲ್ ಮೈದಾನದ ಆಡಳಿತ ಮಂಡಳಿ ಕೊಹ್ಲಿಗೆ ಇಲ್ಲಿ ಮದುವೆಯಾಗುವಂತೆ ಆಹ್ವಾನ ನೀಡಿದೆ.

ಈ ಬಗ್ಗೆ ಮಾತನಾಡಿದ ಕ್ರೀಡಾಂಗಣದ ಸಿಇಓ ಆಂಡ್ರ್ಯೂ ಡೇನಿಯಲ್ ನಾವು ಅಡಿಲೇಡ್ ಓವಲ್ ಮೈದಾನದಲ್ಲಿ ಅನುಷ್ಕಾ – ಕೊಹ್ಲಿ ಮದುವೆ ಮಾಡಲು ಉತ್ಸುಕರಾಗಿದ್ದೇವೆ. ಈ ಮೈದಾನದಲ್ಲಿ ತಮ್ಮ ಜೀವನದ ದೊಡ್ಡ ಸಂಭ್ರಮವನ್ನು ಆಚರಿಸಿಕೊಳ್ಳುವುದು ಕೊಹ್ಲಿಗೆ ವಿಶೇಷವಾಗಿರಲಿದೆ. ಈ ಮೈದಾನದಲ್ಲಿ ಶ್ರೇಷ್ಠ ಬ್ಯಾಟ್ಸ್ಮೆನ್ ಕೊಹ್ಲಿ ತಮ್ಮ ವೃತ್ತಿ ಜೀವನದ ಅತ್ಯುತ್ತಮ ಇನ್ನಿಂಗ್ಸ್ ಆಡಿದ್ದಾರೆಂದು ಡೇನಿಯಲ್ ಹೇಳಿದ್ದಾರೆ.

ವಿರಾಟ್ ಕೊಹ್ಲಿಗೆ ಅಡಿಲೇಡ್ ಓವಲ್ ಮೈದಾನ ಅದೃಷ್ಟದ ಮೈದಾನವಾಗಿದೆ. ತಮ್ಮ ಟೆಸ್ಟ್ ವೃತ್ತಿ ಜೀವನದ ಮೊದಲ ಶತಕವನ್ನು ಕೊಹ್ಲಿ ಇದೇ ಮೈದಾನದಲ್ಲಿ ಸಿಡಿಸಿದ್ದಾರೆ. ಮೂರು ಟೆಸ್ಟ್ ಶತಕವನ್ನು ಕೊಹ್ಲಿ ಇದೇ ಮೈದಾನದಲ್ಲಿ ಬಾರಿಸಿದ್ದಾರೆ. ಪಾಕಿಸ್ತಾನದ ವಿರುದ್ಧ ನಡೆದ ವಿಶ್ವಕಪ್ ಪಂದ್ಯದಲ್ಲಿಯೂ ಇದೇ ಮೈದಾನದಲ್ಲಿ ಕೊಹ್ಲಿ ಶತಕ ಸಿಡಿಸಿದ್ದರು.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...