alex Certify
ಕನ್ನಡ ದುನಿಯಾ       Mobile App
       

Kannada Duniya

ಮತ್ತೆ ವೈರಲ್ ಆಯ್ತು ಧೋನಿ ಲುಂಗಿ ಡಾನ್ಸ್

61-dhoni_5

ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಎಂ.ಎಸ್.ಧೋನಿ ಒಳ್ಳೆ ನಾಯಕತ್ವದಿಂದಾಗಿ ಕೂಲ್ ಕ್ಯಾಪ್ಟನ್ ಎಂದೇ ಹೆಸರು ಪಡೆದಿದ್ದರು. ಧೋನಿ ಬ್ಯಾಟಿಂಗ್ ಬಗ್ಗೆ ಅಭಿಮಾನಿಗಳಿಗೆ ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಸೋಲಿನಂಚಿನಲ್ಲಿರುವ ತಂಡಕ್ಕೆ ಗೆಲುವು ತಂದು ಕೊಡುವ ಶಕ್ತಿ ಧೋನಿಗಿದೆ. ಮೈದಾನದಲ್ಲಿ ಧೋನಿ ಹೇಗಿರುತ್ತಾರೆ ಎಂಬುದು ಎಲ್ಲರಿಗೂ ಗೊತ್ತು. ಆದ್ರೆ ಧೋನಿಯೊಬ್ಬರು ಬೆಸ್ಟ್ ಡಾನ್ಸರ್ ಎಂಬುದು ಅನೇಕರಿಗೆ ತಿಳಿದಿಲ್ಲ.

ಯಸ್. ಧೋನಿ ಉತ್ತಮ ಡಾನ್ಸರ್. ಅದಕ್ಕೆ ಪುಷ್ಠಿ ನೀಡುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಒಂದು ವರ್ಷದ ಹಿಂದೆ ಟಿವಿಎಸ್ ಜಾಹೀರಾತಿಗಾಗಿ ತೆಗೆದ ವಿಡಿಯೋ ಇದಾಗಿದೆ. ಆದ್ರೆ ಈಗ ಮತ್ತೆ ಈ ವಿಡಿಯೋ ವೈರಲ್ ಆಗಿದೆ.

ಈ ವಿಡಿಯೋದಲ್ಲಿ ಡಾನ್ಸ್ ಕಿಂಗ್ ಪ್ರಭುದೇವ್ ಜೊತೆ ಲುಂಗಿ ಡಾನ್ಸ್ ಮಾಡ್ತಿದ್ದಾರೆ ಧೋನಿ. ಪ್ರಭುದೇವ್ ಧೋನಿಗೆ ತರಬೇತಿ ನೀಡ್ತಾ ಇದ್ದರೆ ಧೋನಿ ಕೆಲವೊಂದು ಕಡೆ ನಗುತ್ತಿದ್ದಾರೆ.  ಕೆಲ ದಿನಗಳ ಹಿಂದಷ್ಟೇ ಧೋನಿಯ ಇನ್ನೊಂದು ಡಾನ್ಸ್ ವಿಡಿಯೋ ವೈರಲ್ ಆಗಿತ್ತು. ಅದ್ರಲ್ಲಿ ಪುಣೆ ತಂಡದ ಜೊತೆ ಡಾನ್ಸ್ ಮಾಡಿದ್ದರು ಧೋನಿ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...