alex Certify
ಕನ್ನಡ ದುನಿಯಾ       Mobile App
       

Kannada Duniya

ಮತ್ತೆ ಹೇರ್ ಸ್ಟೈಲ್ ಬದಲಿಸಿ ಸುದ್ದಿಗೆ ಬಂದ್ರು ಧೋನಿ

ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಇಂಗ್ಲೆಂಡ್ ಪ್ರವಾಸ ಮುಗಿಸಿ ಭಾರತಕ್ಕೆ ವಾಪಸ್ ಆಗಿದ್ದಾರೆ. ಇಂಗ್ಲೆಂಡ್ ವಿರುದ್ಧ ಭಾರತ ಟಿ-20 ಸರಣಿಯಲ್ಲಿ ಜಯ ಸಾಧಿಸಿದ್ದು, ಏಕದಿನ ಪಂದ್ಯದಲ್ಲಿ ಸೋಲುಂಡಿದೆ. ಆಗಸ್ಟ್ 1 ರಿಂದ ಐದು ಟೆಸ್ಟ್ ಪಂದ್ಯಗಳ ಸರಣಿ ನಡೆಯಲಿದೆ. ಟಿ-20 ಹಾಗೂ ಏಕದಿನ ಪಂದ್ಯವನ್ನಾಡಿರುವ ಮಹೇಂದ್ರ ಸಿಂಗ್ ಧೋನಿ ಭಾರತಕ್ಕೆ ವಾಪಸ್ ಆಗಿದ್ದಾರೆ.

ಸೆಪ್ಟೆಂಬರ್ ನಲ್ಲಿ ಏಷ್ಯಾಕಪ್ ನಡೆಯಲಿದೆ. ಸೆಪ್ಟೆಂಬರ್ 19 ರಂದು ದುಬೈನಲ್ಲಿ ಭಾರತ-ಪಾಕಿಸ್ತಾನದ ಮಧ್ಯೆ ಪಂದ್ಯ ನಡೆಯಲಿದೆ. ಅಲ್ಲಿಯವರೆಗೆ ಮಹೇಂದ್ರ ಸಿಂಗ್ ಧೋನಿ ಕುಟುಂಬಸ್ಥರ ಜೊತೆ ವಿಶ್ರಾಂತಿ ಪಡೆಯಲಿದ್ದಾರೆ. ಏಷ್ಯಾಕಪ್ ಗೂ ಮುನ್ನ ಧೋನಿ ತಮ್ಮ ಹೇರ್ ಸ್ಟೈಲ್ ಬದಲಿಸಿದ್ದಾರೆ. ಐಪಿಎಲ್ ವೇಳೆ ಹೇರ್ ಸ್ಟೈಲ್ ಬದಲಿಸಿದ್ದ ಧೋನಿ ಈಗ ಮತ್ತೆ ಹೇರ್ ಸ್ಟೈಲ್ ಬದಲಿಸಿದ್ದಾರೆ.

ಧೋನಿ V-Hawk ಹೆಸರಿನ ಹೇರ್ ಸ್ಟೈಲ್ ಮಾಡಿದ್ದಾರೆ. ಧೋನಿ ಹೇರ್ ಸ್ಟೈಲ್ ಮೂಲಕ ಚರ್ಚೆಗೆ ಬರೋದು ಇದೇ ಮೊದಲಲ್ಲ. ಉದ್ದದ ಕೂದಲು ಬಿಟ್ಟು ಕ್ರಿಕೆಟ್ ವೃತ್ತಿ ಶುರು ಮಾಡಿದ್ದ ಧೋನಿ ಆಗಾಗ ತಮ್ಮ ಹೇರ್ ಸ್ಟೈಲ್ ನಿಂದ ಸುದ್ದಿಗೆ ಬರ್ತಾರೆ. ಧೋನಿ ಹೇರ್ ಸ್ಟೈಲ್ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರನ್ನೂ ಆಕರ್ಷಿಸುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...