alex Certify
ಕನ್ನಡ ದುನಿಯಾ       Mobile App
       

Kannada Duniya

ಮತ್ತೆ ಮೈದಾನದಲ್ಲಿ ಕಾಣಿಸಲಿದ್ದಾರೆ ವಿನೋದ್ ಕಾಂಬ್ಳಿ

ಭಾರತದ ಮಾಜಿ ಕ್ರಿಕೆಟ್ ಆಟಗಾರ ವಿನೋದ್ ಕಾಂಬ್ಳಿ ಮತ್ತೆ ಕ್ರಿಕೆಟ್ ಮೈದಾನದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ದೊಡ್ಡ ಜವಾಬ್ದಾರಿಯೊಂದು ಕಾಂಬ್ಳಿ ಹೆಗಲೇರಿದೆ. ಮುಂಬೈ ಟಿ-20 ಲೀಗ್ ನ ಫ್ರಾಂಚೈಸಿ ಶಿವಾಜಿ ಪಾರ್ಕ್ ಲಯನ್ಸ್ ನ ಮೆಂಟರ್ ಆಗಿ ಕಾಂಬ್ಳಿ ಆಯ್ಕೆಯಾಗಿದ್ದಾರೆ.

ಭಾನುವಾರ ಈ ಬಗ್ಗೆ ಮಾಹಿತಿ ನೀಡಿದ ಕಾಂಬ್ಳಿ ಶಿವಾಜಿ ಪಾರ್ಕ್ ಲಯನ್ಸ್ ತಂಡದ ಜೊತೆ ನನ್ನ ಅನುಭವವನ್ನು ಹಂಚಿಕೊಂಡು ಮಾರ್ಗದರ್ಶನ ನೀಡಲು ಉತ್ಸುಕನಾಗಿದ್ದೇನೆ. ಈ ತಂಡದಲ್ಲಿ ಪ್ರತಿಭಾನ್ವಿತ ಆಟಗಾರರಿದ್ದಾರೆಂದು ಕಾಂಬ್ಳಿ ಹೇಳಿದ್ದಾರೆ.

ಸೋಮವಾರದಿಂದ ಪಂದ್ಯ ಶುರುವಾಗ್ತಿದೆ. ಈ ಟೂರ್ನಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವಂತೆ ಕಾಂಬ್ಳಿ ತನ್ನ ತಂಡದ ಸದಸ್ಯರಿಗೆ ಸಲಹೆ ನೀಡಿದ್ದಾರೆ. ಮಾರ್ಚ್ 21ರವರೆಗೆ ಪಂದ್ಯ ನಡೆಯಲಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...