alex Certify
ಕನ್ನಡ ದುನಿಯಾ       Mobile App
       

Kannada Duniya

ಹಾವಿನ ರಕ್ತ ಕುಡಿದವನಿಗೆ ಮಣ್ಣು ಮುಕ್ಕಿಸಿದ ವಿಜೇಂದರ್

viji 13

ಲಿವರ್ ಪೂಲ್: ಭಾರತದ ಖ್ಯಾತ ಬಾಕ್ಸಿಂಗ್ ಪಟು ವಿಜೇಂದರ್ ಸಿಂಗ್ ಅವರನ್ನು ಸೋಲಿಸಲು, ಹಾವಿನ ರಕ್ತ ಕುಡಿದು ತಯಾರಿ ನಡೆಸಿದ್ದ ಹಂಗೇರಿಯ ಬಾಕ್ಸರ್ ಅಲೆಕ್ಸಾಂಡರ್ ಹೊರಾತ್ ನಿರಾಸೆ ಅನುಭವಿಸಿದ್ದಾರೆ. ಮಹತ್ವದ ಪಂದ್ಯದಲ್ಲಿ ಹೊರಾತ್, ವಿಜೇಂದರ್ ಎದುರು ಸೋಲು ಕಂಡರು.

ವೃತ್ತಪರ ಬಾಕ್ಸಿಂಗ್ ನಲ್ಲಿ ಉದಯೋನ್ಮುಖ ತಾರೆಯಾಗಿರುವ ವಿಜೇಂದರ್ ಸಿಂಗ್ ಲಿವರ್ ಪೂಲ್ ನ ಎಕೋ ಅರೆನಾದಲ್ಲಿ ನಡೆದ ಪಂದ್ಯದಲ್ಲಿ ಹೊರಾತ್ ಅವರನ್ನು ಸೋಲಿಸಿದ್ದಾರೆ. ಈ ಮೂಲಕ ವಿಜೇಂದರ್ ತಮ್ಮ ನಾಲ್ಕನೇ ವೃತ್ತಿಪರ ಬಾಕ್ಸಿಂಗ್ ನಲ್ಲಿಯೂ ಗೆಲವು ಸಾಧಿಸಿದ್ದಾರೆ. ಹಂಗೇರಿಯ ಬಾಕ್ಸರ್ ವಿರುದ್ಧ ಮೊದಲ ಸುತ್ತಿನಲ್ಲೇ ಪ್ರಾಬಲ್ಯ ಮೆರೆದರು. ಎರಡನೇ ಸುತ್ತಿನಲ್ಲಿಯೂ ಗಮನಾರ್ಹ ಆಟವಾಡಿದ ವಿಜೇಂದರ್, ಮೂರನೇ ಸುತ್ತಿನ ಆರಂಭದಲ್ಲಿಯೇ ಮೇಲುಗೈ ಸಾಧಿಸಿದರು.

ಮೂರೂ ಸುತ್ತುಗಳಲ್ಲಿ ಹೊರಾತ್ ಅವರಿಗೆ ಸರಿಯಾದ ಪಂಚ್ ಗಳನ್ನೇ ಕೊಟ್ಟ ವಿಜೇಂದರ್, ಹಾವಿನ ರಕ್ತವನ್ನು ಕುಡಿದು ತಮ್ಮನ್ನು ಸೋಲಿಸಲು ತಯಾರಿ ನಡೆಸಿದ್ದ ಹಂಗೇರಿಯ ಬಾಕ್ಸರ್ ಹೊರಾತ್ ಅವರಿಗೆ ಮಣ್ಣು ಮುಕ್ಕುವಂತೆ ಮಾಡಿದರು. ಈ ಮೂಲಕ ವಿಜೇಂದರ್ ವೃತ್ತಿಪರ ಬಾಕ್ಸಿಂಗ್ ನಲ್ಲಿ ನಾಲ್ಕೂ ಪಂದ್ಯಗಳಲ್ಲಿ ಜಯಗಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...