alex Certify
ಕನ್ನಡ ದುನಿಯಾ       Mobile App
       

Kannada Duniya

ಆರ್.ಸಿ.ಬಿ. ನಿರ್ದೇಶಕ ಸ್ಥಾನದಿಂದ ಹೊರ ನಡೆದ ಮಲ್ಯ

Mallya-IPL rcb

ಶೋಮ್ಯಾನ್ ಎಂದೇ ಖ್ಯಾತವಾಗಿದ್ದ ಉದ್ಯಮಿ ವಿಜಯ್ ಮಲ್ಯ ಸಂಕಷ್ಟದಲ್ಲಿದ್ದು, ವಿದೇಶದಲ್ಲಿ ನೆಲೆಸಿದ್ದಾರೆ. ದೇಶದ ವಿವಿಧ ಬ್ಯಾಂಕ್ ಗಳಲ್ಲಿ ಬರೋಬ್ಬರಿ 9000 ಕೋಟಿ ರೂ. ಸಾಲ ಮಾಡಿರುವ ವಿಜಯ್ ಮಲ್ಯ ವಿರುದ್ಧ ಪ್ರಕರಣ ದಾಖಲಾಗುತ್ತಿವೆ.

ಇದೀಗ ಮಲ್ಯ ಐಪಿಎಲ್ ನಲ್ಲಿ ಆಟವಾಡುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕ್ರಿಕೆಟ್ ತಂಡದ ಫ್ರಾಂಚೈಸಿಯ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. 2008 ರಲ್ಲಿ ಆರ್.ಸಿ.ಬಿ. ಮಾಲೀಕತ್ವ ಪಡೆದಿದ್ದ ವಿಜಯ್ ಮಲ್ಯ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಇನ್ನು ಮುಂದೆ ಗೌರವ ಸಲಹೆಗಾರರಾಗಿ ಮುಂದುವರೆಯಲಿದ್ದಾರೆ. ಆರ್.ಸಿ.ಬಿ. ಫ್ರಾಂಚೈಸಿ ಅಧಿಕಾರಿಯಾಗಿರುವ ರಸೆಲ್ ಆಡಮ್ಸ್ ಈ ಕುರಿತಂತೆ ಬಿಸಿಸಿಐ ಗೆ ಪತ್ರ ಬರೆದಿದ್ದು, ಮಲ್ಯ ರಾಜೀನಾಮೆ ನೀಡಿದ್ದಾರೆ ಎಂದು ತಿಳಿಸಿದ್ದಾರೆ.

ಮಲ್ಯ ರಾಜೀನಾಮೆ ನೀಡಿರುವುದರಿಂದ ರಸೆಲ್ ಆಡಮ್ಸ್ ಹಂಗಾಮಿಯಾಗಿ ನಿರ್ದೇಶಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ಮಲ್ಯ ಅವರ ಪುತ್ರ ಸಿದ್ಧಾರ್ಥ ಮಲ್ಯ ನಿರ್ದೇಶಕರ ಮಂಡಳಿಯಲ್ಲಿ ಇರುವವರೆಗೆ ವಿಜಯ್ ಮಲ್ಯ ಗೌರವ ಸಲಹೆಗಾರರಾಗಿರುತ್ತಾರೆ ಎನ್ನಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...