alex Certify
ಕನ್ನಡ ದುನಿಯಾ       Mobile App
       

Kannada Duniya

ಟೀಂ ಇಂಡಿಯಾ–ಮಲ್ಯ ಭೇಟಿಗೆ ಒಪ್ಪಿಗೆ ನೀಡದ ಸರ್ಕಾರ

ಟೀಂ ಇಂಡಿಯಾ ಇಂಗ್ಲೆಂಡ್ ಪ್ರವಾಸದಲ್ಲಿದೆ. ಮದ್ಯದ ದೊರೆ ವಿಜಯ್ ಮಲ್ಯ ಕ್ರಿಕೆಟ್ ಪ್ರೇಮಿ. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಮಾಧ್ಯಮಗಳ ವರದಿ ಪ್ರಕಾರ, ಮಲ್ಯ ಇಂಗ್ಲೆಂಡ್ ನಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಹಾಗೂ ತಂಡದ ಇತರ ಸದಸ್ಯರನ್ನು ಭೇಟಿಯಾಗಲು ಬಯಸಿದ್ದನಂತೆ. ಆದ್ರೆ ಭಾರತ ಸರ್ಕಾರ ಇದಕ್ಕೆ ಒಪ್ಪಿಗೆ ನೀಡಿಲ್ಲ.

ಆಡಳಿತ ಮಂಡಳಿ ಮಲ್ಯರಿಂದ ದೂರವಿರುವಂತೆ ಕಟ್ಟುನಿಟ್ಟಿನ ಸೂಚನೆ ಹೊರಡಿಸಿದೆ. ಕೆಲ ಸಮಯದ ಹಿಂದೆ ಕ್ರಿಕೆಟ್ ಪಂದ್ಯವೊಂದರಲ್ಲಿ ಮಲ್ಯ ಕಾಣಿಸಿಕೊಂಡಿದ್ದ. ಮಲ್ಯ ನೋಡಿದ್ದ ಭಾರತೀಯರು ಕಿಡಿಕಾರಿದ್ದರು. ಐಪಿಎಲ್ ನಲ್ಲಿ ಬೆಂಗಳೂರಿನ ತಂಡದ ಮಾಲೀಕ ಮಲ್ಯ. ಆರ್ಸಿಬಿ ತಂಡದ ನಾಯಕ ವಿರಾಟ್ ಕೊಹ್ಲಿ. ಇದೇ ಕಾರಣಕ್ಕೆ ಮಲ್ಯ, ಕೊಹ್ಲಿಯನ್ನು ಭೇಟಿಯಾಗಲು ಬಯಸಿದ್ದನಂತೆ. ಆದ್ರೆ ಅದು ಸಾಧ್ಯವಾಗಲಿಲ್ಲ.

ಈ ಮಧ್ಯೆ ಮಲ್ಯ ಕೇಸ್ ವಿಚಾರಣೆ ನಡೆಸುತ್ತಿರುವ ಲಂಡನ್ ಕೋರ್ಟ್, ಆರ್ಥರ್ ರೋಡ್ ಜೈಲಿನ ಫೋಟೋ ಕಳುಹಿಸುವಂತೆ ಭಾರತಕ್ಕೆ ಹೇಳಿದೆ. ಭಾರತದ ಜೈಲುಗಳ ಸ್ಥಿತಿ ಚೆನ್ನಾಗಿಲ್ಲವೆಂದು ಮಲ್ಯ ಹೇಳಿಕೆ ನೀಡಿದ್ದ. ಈ ಕಾರಣಕ್ಕಾಗಿ ಕೋರ್ಟ್, ಜೈಲಿನ ಪರಿಸ್ಥಿತಿ ನೋಡಲು ಮುಂದಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...