alex Certify
ಕನ್ನಡ ದುನಿಯಾ       Mobile App
       

Kannada Duniya

ಆಟಗಾರರಿಗೂ ಹಣ ಕೊಡದೆ ಕೈ ಎತ್ತಿದ್ದಾರೆ ವಿಜಯ್ ಮಲ್ಯ

ಭಾರತದ ಹಲವು ಬ್ಯಾಂಕುಗಳಿಂದ ಸಾವಿರಾರು ಕೋಟಿ ರೂ. ಸಾಲ ಪಡೆದು ಅದನ್ನು ತಮ್ಮ ಐಷಾರಾಮಿ ಜೀವನಕ್ಕೆ ಖರ್ಚು ಮಾಡಿದ್ದಲ್ಲದೇ ಸಾಲ ಮರು ಪಾವತಿಸದೆ ವಿದೇಶಕ್ಕೆ ಪರಾರಿಯಾಗಿರುವ ಮದ್ಯದ ದೊರೆ ವಿಜಯ್ ಮಲ್ಯ, ತಾವು ಮಾಲೀಕರಾಗಿದ್ದ ಕ್ರಿಕೆಟ್ ತಂಡದ ಆಟಗಾರರಿಗೂ ಹಣ ಪಾವತಿಸಿಲ್ಲವೆಂಬ ಸಂಗತಿ ಬೆಳಕಿಗೆ ಬಂದಿದೆ.

ಕ್ರೀಡೆಗಳ ಕುರಿತು ಕ್ರೇಜ್ ಹೊಂದಿರುವ ವಿಜಯ್ ಮಲ್ಯ, ಫಾರ್ಮುಲಾ ರೇಸ್, ಐಪಿಎಲ್, ಸಿಪಿಎಲ್ ಗಳಲ್ಲಿ ಪ್ರಾಂಚೈಸಿಯಾಗಿದ್ದರು. ಕೆರೆಬಿಯನ್ ಪ್ರಿಮಿಯರ್ ಲೀಗ್ ನಲ್ಲಿ ಬಾರ್ಬಡೋಸ್ ಟ್ರೈಡೆಂಟ್ ತಂಡದ ಮಾಲೀಕರಾಗಿರುವ ವಿಜಯ್ ಮಲ್ಯ, ತಮ್ಮ ತಂಡದ ಆಟಗಾರರಿಗೆ 2017 ರ ಸಾಲಿನ ಹಣ ಪಾವತಿಸದೆ ಬಾಕಿ ಉಳಿಸಿಕೊಂಡಿದ್ದಾರೆಂದು ಹೇಳಲಾಗಿದೆ.

10,000 ದಿಂದ 100,000 ಡಾಲರ್ ವರೆಗೆ ವಿಜಯ್ ಮಲ್ಯ ಹಣ ಪಾವತಿಸಬೇಕಿದ್ದು, ಫೆಡರೇಷನ್ ಆಫ್ ಇಂಟರ್ ನ್ಯಾಷನಲ್ ಕ್ರಿಕೆಟರ್ಸ್ ಅಸೋಸಿಯೇಷನ್ ಕಾರ್ಯ ನಿರ್ವಾಹಕ ಚೇರ್ಮನ್ ಟೋನಿ ಐರಿಷ್ ಸಹ ಇದನ್ನು ಖಚಿತಪಡಿಸಿದ್ದಾರೆ. ವಿಜಯ್ ಮಲ್ಯ ಅವರ ಹೆಸರೇಳದೆ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿರುವ ಅವರು, ಪ್ರಾಂಚೈಸಿಯೊಬ್ಬರು ಆಟಗಾರರಿಗೆ ಹಣ ಪಾವತಿ ಮಾಡದಿರುವುದು ದುರದೃಷ್ಟಕರ. ಈ ಕುರಿತು ಮಾತುಕತೆ ನಡೆಸಲಾಗುತ್ತಿದ್ದು, ಆಟಗಾರರ ಹಣ ಪಾವತಿಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...