alex Certify
ಕನ್ನಡ ದುನಿಯಾ       Mobile App
       

Kannada Duniya

ಮತ್ತೆ ನಡೀತು ಕ್ರಿಕೆಟ್ ಲೋಕವೇ ಬೆಚ್ಚಿ ಬೀಳುವ ಘಟನೆ

ಆಸ್ಟ್ರೇಲಿಯಾ ಕ್ರಿಕೆಟಿಗ ಫಿಲಿಪ್ ಹ್ಯೂಸ್ ಅವರನ್ನು ಬೌನ್ಸರ್ ಮೂಲಕ ಹೊಡೆದು ಕೊಂದ ಬೌಲರ್ ಸೀನ್ ಅಬೋಟ್ ಮತ್ತೊಂದು ಅಂತುಹುದೇ ಅಪಾಯಕಾರಿ ಎಸೆತ ಎಸೆದಿದ್ದಾರೆ.

ಅದೃಷ್ಟವಶಾತ್ ಅವರ ಎಸೆತಕ್ಕೆ ಈ ಬಾರಿ ಆಟಗಾರ ಬಲಿಯಾಗಿಲ್ಲ. ತಲೆಗೆ ಚೆಂಡು ಬಡಿದು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ಸೇರಿದ್ದಾರೆ. ವಿಕ್ಟೋರಿಯಾ ಬ್ಯಾಟ್ಸ್ ಮನ್ ವೀಲ್ ಫುಕೋಸ್ಕಿ ಗಾಯಗೊಂಡವರು.

ಆಸ್ಟ್ರೇಲಿಯಾದ ಶೆಫೀಲ್ಟ್ ಶೀಲ್ಡ್ ಕ್ರಿಕೆಟ್ ಟೂರ್ನಿಯಲ್ಲಿ ನ್ಯೂ ಸೌತ್ ವೇಲ್ಸ್ ಪರ ಆಡುತ್ತಿರುವ ಫಾಸ್ಟ್ ಬೌಲರ್ ಸೀನ್ ಅಬೋಟ್, ಬೌನ್ಸರ್ ಹಾಕಿದ್ದಾರೆ. ಚೆಂಡು ನೇರವಾಗಿ ಫುಕೋಸ್ಕಿಗೆ ಬಡಿದು ಅವರು ಮೈದಾನದಲ್ಲೇ ಕುಸಿದು ಬಿದ್ದಿದ್ದಾರೆ.

ಕೂಡಲೇ ಅವರಿಗೆ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ಸೇರಿಸಲಾಗಿದ್ದು, ಅಪಾಯದಿಂದ ಪಾರಾಗಿದ್ದಾರೆ.

ಫಿಲಿಪ್ ಹ್ಯೂಸ್ ಸಾವಿಗೆ ಕಾರಣನಾಗಿದ್ದ ಸೀನ್ ಅಬೋಟ್ ಭಾನುವಾರ ಮತ್ತೊಂದು ಅಪಾಯಕಾರಿ ಎಸೆತ ಹಾಕಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...