alex Certify
ಕನ್ನಡ ದುನಿಯಾ       Mobile App
       

Kannada Duniya

ಸಿ ಎಸ್ ಕೆ ತಂಡದಲ್ಲಿ ರೈನಾಗೆ ಸಿಕ್ತು ದೊಡ್ಡ ಜವಾಬ್ದಾರಿ

ಕ್ರಿಕೆಟರ್ ಸುರೇಶ್ ರೈನಾಗೆ ಹೊಸ ಜವಾಬ್ದಾರಿ ಸಿಕ್ಕಿದೆ. ಸುರೇಶ್ ರೈನಾರನ್ನು ಐಪಿಎಲ್ ಸೀಸನ್ 11ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಉಪನಾಯಕನಾಗಿ ಆಯ್ಕೆ ಮಾಡಲಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ನಾಯಕನ ಜವಾಬ್ದಾರಿಯನ್ನು ಮಹೇಂದ್ರ ಸಿಂಗ್ ಧೋನಿ ಹೊರುತ್ತಿದ್ದಾರೆ.

ಚೆನ್ನೈ ಸೂಪರ್ ಕಿಂಗ್ಸ್ ನಲ್ಲಿ ಉಪನಾಯಕನ ಪಟ್ಟ ಸಿಕ್ಕಿರುವ ವಿಚಾರವನ್ನು ಸ್ವತಃ ರೈನಾ ಬುಧವಾರ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಎರಡು ವರ್ಷಗಳಿಂದ ರೈನಾ ಗುಜರಾತ್ ಲಯನ್ಸ್ ತಂಡದಲ್ಲಿದ್ದರು. ಅಲ್ಲಿ ನಾಯಕನ ಕೆಲಸ ನಿಭಾಯಿಸಿದ್ದರು.

11ನೇ ಋತುವಿನಲ್ಲಿ ಚೆನ್ನೈ ಧೋನಿ ಹಾಗೂ ರವೀಂದ್ರ ಜಡೇಜಾರನ್ನು ಉಳಿಸಿಕೊಂಡಿದೆ. ಈ ಹಿಂದೆಯೂ ಚೆನ್ನೈ ಸೂಪರ್ ಕಿಂಗ್ಸ್ ನಾಯಕನಾಗಿದ್ದ ಧೋನಿ ಈಗ್ಲೂ ಅದೇ ಪಟ್ಟ ಮುಂದುವರೆಸಲಿದ್ದಾರೆ. ಧೋನಿ ಉತ್ತರಾಧಿಕಾರಿಯಾಗಿ ರೈನಾರನ್ನು ತಂಡ ಆಯ್ಕೆ ಮಾಡಿದೆ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...