alex Certify
ಕನ್ನಡ ದುನಿಯಾ       Mobile App
       

Kannada Duniya

ಪಾಕ್ ಕ್ರಿಕೆಟ್ ತಂಡದ ಮೊದಲ ವಿಕೆಟ್ ಪತನ

vakar

ಭಾರತದಲ್ಲಿ ನಡೆದ ಟಿ-20 ವಿಶ್ವಕಪ್ ಪಂದ್ಯಾವಳಿಯಲ್ಲಿ ಸೋತು ಸುಣ್ಣವಾಗಿರುವ, ಪಾಕಿಸ್ತಾನ ಕ್ರಿಕೆಟ್ ತಂಡದ ನಾಯಕ ಶಾಹಿದ್ ಅಫ್ರಿದಿ, ತಲೆದಂಡದ ಮಾತುಗಳು ಕೇಳಿಬರುತ್ತಿರುವಾಗಲೇ, ಮೊದಲ ವಿಕೆಟ್ ಪತನವಾಗಿದೆ.

ಶ್ರೇಷ್ಟ ಪ್ರದರ್ಶನ ನೀಡುವ ವಿಶ್ವಾಸದೊಂದಿಗೆ ಪಾಕ್, ಭಾರತಕ್ಕೆ ಬಂದಿತ್ತು. ಆದರೆ, ಕೋಲ್ಕತ್ತಾದಲ್ಲಿ ನಡೆದ ಹೈವೋಲ್ಟೇಜ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಭಾರತ ತಂಡದ ಎದುರು ಸೋಲು ಕಂಡಿದ್ದು, ಪಾಕ್ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಮಾತ್ರವಲ್ಲ, ಮಾಜಿ ಆಟಗಾರರು, ಕ್ರಿಕೆಟ್ ಮಂಡಳಿ ಕೂಡ ಅಸಮಾಧಾನ ವ್ಯಕ್ತಪಡಿಸಿ, ಪಾಕ್ ತಂಡ ಕಳಪೆ ಪ್ರದರ್ಶನ ನೀಡಿದೆ ಎಂದೆಲ್ಲಾ ಹೇಳಿದ್ದರು. ಅಲ್ಲದೇ, ಅಫ್ರಿದಿ ತಲೆದಂಡ ಗ್ಯಾರಂಟಿ ಎನ್ನಲಾಗಿತ್ತು. ಲೀಗ್ ಹಂತದಲ್ಲೇ ಹೊರಬಿದ್ದ ಪಾಕಿಸ್ತಾನ ತಂಡದಲ್ಲಿ ಒಂದೊಂದೇ ವಿಕೆಟ್ ಪತನವಾಗಲಿವೆ ಎಂದು ಹೇಳಲಾಗಿದೆ.

ಮೊದಲ ಹಂತದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ತರಬೇತುದಾರ ವಕಾರ್ ಯೂನಸ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಪಾಕ್ ತಂಡದಲ್ಲಿ ಹಲವಾರು ಸಮಸ್ಯೆಗಳಿವೆ. ಅವುಗಳನ್ನು ಸರಿಪಡಿಸಿಕೊಳ್ಳುವ ನಿಟ್ಟಿನಲ್ಲಿ ಹಾಗೂ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದ್ದಕ್ಕೆ ತಾವು ರಾಜೀನಾಮೆ ನೀಡುತ್ತಿರುವುದಾಗಿ ಅವರು ತಿಳಿಸಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...