alex Certify
ಕನ್ನಡ ದುನಿಯಾ       Mobile App
       

Kannada Duniya

ವಿದಾಯದ ನಂತ್ರ ಸಿಕ್ಕಾಪಟ್ಟೆ ಕುಡಿದ್ರು ಬೋಲ್ಟ್…!

bolt_s_1503286352_618x347

ವಿಶ್ವದ ಶರವೇಗದ ಆಟಗಾರ ಉಸೈನ್ ಬೋಲ್ಟ್ ತಮ್ಮ ವೃತ್ತಿಗೆ ವಿದಾಯ ಹೇಳಿದ್ದಾರೆ. ಜಮೈಕಾದ ಉಸೈನ್ ಬೋಲ್ಟ್ ವಿಶ್ವ ಅಥ್ಲೆಟಿಕ್ ಚಾಂಪಿಯನ್ ಶಿಪ್ ನಲ್ಲಿ ಸೋಲುಣ್ಣುವ ಮೂಲಕ ವಿದಾಯ ಹೇಳಿದ್ದಾರೆ. ಇದಾದ ನಂತ್ರ ಬೋಲ್ಟ್ ತುಂಬಾ ಮದ್ಯಪಾನ ಮಾಡಿದ್ದಾರಂತೆ.

ಮೂಲಗಳ ಪ್ರಕಾರ,  ಲಂಡನ್ ನಲ್ಲಿ ಸ್ನೇಹಿತರ ಜೊತೆ ಸೇರಿ ಬೋಲ್ಟ್ ಮದ್ಯ ಸೇವಿಸಿದ್ದಾರಂತೆ. ಸುಮಾರು 6 ಲಕ್ಷ ರೂಪಾಯಿಯಷ್ಟು ಮದ್ಯ ಸೇವನೆ ಮಾಡಿದ್ದಾರಂತೆ ಬೋಲ್ಟ್. ಸಾಮಾಜಿಕ ಜಾಲತಾಣದಲ್ಲಿ ಬಾರ್ ಬಿಲ್ ವೈರಲ್ ಆಗಿದೆ.

ತಮ್ಮ ಕೊನೆಯ ರೇಸ್ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಲು ಸಾಧ್ಯವಾಗದ ಬೋಲ್ಟ್ ಸ್ನೇಹಿತರ ಜೊತೆ ಬೇರೆ ಬೇರೆ ಬ್ರ್ಯಾಂಡ್ ನ ಮದ್ಯ ಸೇವನೆ ಮಾಡಿದ್ದಾರಂತೆ. ಇದ್ರಲ್ಲಿ Dom Pérignon Champagne ಐದು ಬಾಟಲಿ ಹಾಗೂ Magnums ನ ಎರಡು ಬಾಟಲಿ, ವೊಡ್ಕಾ ಸೇರಿದೆ.

ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್‍ನ 4×100 ಮೀಟರ್ ರಿಲೇಯನ್ನು ಬೋಲ್ಟ್ ಪೂರ್ಣಗೊಳಿಸಲಿಲ್ಲ. ಇದ್ರಿಂದ ಕೊನೆಯ ಪಂದ್ಯದಲ್ಲಿ ತಂಡಕ್ಕೆ ಚಿನ್ನದ ಪದಕ ನೀಡಬೇಕೆಂಬ ಕನಸು ಭಗ್ನವಾಯ್ತು. 11 ವಿಶ್ವ ಹಾಗೂ 8 ಬಾರಿ ಒಲಂಪಿಕ್ಸ್ ನಲ್ಲಿ ಚಿನ್ನದ ಪದಕ ಗೆದ್ದಿರುವ ಬೋಲ್ಟ್ ಶರವೇಗದ ಓಟಗಾರ ಎಂದೇ ಹೆಸರು ಪಡೆದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...