alex Certify
ಕನ್ನಡ ದುನಿಯಾ       Mobile App
       

Kannada Duniya

ಕೊನೆಯ ಓವರ್ ನ ಒತ್ತಡಕ್ಕೆ ಬಲಿಯಾಯ್ತು ವೃದ್ದ ಜೀವ

cricket-wt20-2016-india-banglaಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರದಂದು ನಡೆದ ವಿಶ್ವ ಟಿ20 ಕ್ರಿಕೆಟ್ ಪಂದ್ಯದಲ್ಲಿ ಭಾರತ ತಂಡ ಬಾಂಗ್ಲಾ ವಿರುದ್ದ ಕೇವಲ 1 ರನ್ ಗಳ ಅಂತರದಿಂದ ರೋಚಕ ಜಯ ಗಳಿಸಿತ್ತು. ಈ ಪಂದ್ಯವನ್ನು ವೀಕ್ಷಿಸುತ್ತಿದ್ದ ವೃದ್ದರೊಬ್ಬರು ಕಡೆಯ ಓವರ್ ನಲ್ಲಿ ಒತ್ತಡಕ್ಕೊಳಗಾಗಿ ಜೀವ ತೆತ್ತಿದ್ದಾರೆ.

ಉತ್ತರ ಪ್ರದೇಶದ ಗೋರಖಪುರ್ ನ ಬಿಸ್ತಾಲಿ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕ್ರಿಕೆಟ್ ಪ್ರೇಮಿಯಾಗಿದ್ದ ಓಂ ಪ್ರಕಾಶ್ ಶುಕ್ಲಾ, ಪಂದ್ಯ ವೀಕ್ಷಿಸುತ್ತಿದ್ದ ವೇಳೆ ಭಾರತ ಗೆಲ್ಲುವುದೋ ಇಲ್ಲವೋ ಎಂಬ ಆತಂಕಕ್ಕೊಳಗಾಗಿದ್ದರು. ಅದರಲ್ಲೂ ಪಂದ್ಯದ ಕಡೆಯ ಓವರ್ ಮಾಡುತ್ತಿದ್ದ ಹಾರ್ದಿಕ್ ಪಾಂಡ್ಯ ಬೌಲಿಂಗ್ ನಲ್ಲಿ ಬಾಂಗ್ಲಾ ಆಟಗಾರ ಮುಶಫ್ಕಿರ್ ರಹೀಂ ಸತತ ಎರಡು ಬೌಂಡರಿ ಬಾರಿಸುತ್ತಿದ್ದಂತೆಯೇ ಓಂ ಪ್ರಕಾಶ್ ತೀವ್ರ ಆಘಾತಕ್ಕೊಳಗಾಗಿದ್ದಾರೆ.

ಎದೆ ನೋವು ಎಂದು ಹೇಳಿ ಅವರು ಕುಸಿದುಬಿದ್ದ ವೇಳೆ ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ತೀವ್ರ ಹೃದಯಾಘಾತಕ್ಕೊಳಗಾಗಿದ್ದ ಅವರು ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ. ದೆಹಲಿಯಲ್ಲಿ ಹಲವು ವರ್ಷಗಳಿಂದ ನೆಲೆಸಿದ್ದ ಅವರು, ಇತ್ತೀಚೆಗಷ್ಟೇ ಬಿಸ್ತಾಲಿಯಲ್ಲಿ ವಾಸವಾಗಿದ್ದರೆನ್ನಲಾಗಿದೆ. ಮೂವರು ಪುತ್ರರನ್ನು ಓಂ ಪ್ರಕಾಶ್ ಶುಕ್ಲಾ ಅಗಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...