alex Certify
ಕನ್ನಡ ದುನಿಯಾ       Mobile App
       

Kannada Duniya

ದವಡೆ ಮುರಿದಿದ್ರೂ ಉನ್ಮುಕ್ತ್ ಚಾಂದ್ ಶತಕದಾಟ

ವಿಜಯ್ ಹಜಾರೆ ಟ್ರೋಫಿಯಲ್ಲಿ ಕ್ರಿಕೆಟಿಗ ಉನ್ಮುಕ್ತ್ ಚಾಂದ್ ಮಾಡಿರೋ ಸಾಧನೆ ಅನಿಲ್ ಕುಂಬ್ಳೆ ಅವರನ್ನು ನೆನಪಿಸಿದೆ. ದವಡೆ ಮುರಿದು ಹೋಗಿದ್ರೂ ಬ್ಯಾಟಿಂಗ್ ಮುಂದುವರಿಸಿದ ಉನ್ಮುಕ್ತ್, 116 ರನ್ ಸಿಡಿಸಿದ್ದಾರೆ.

ಈ ಹಿಂದೆ ಅನಿಲ್ ಕುಂಬ್ಳೆ ಕೂಡ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದಲ್ಲಿ ದವಡೆ ಮುರಿದು ಹೋಗಿದ್ರೂ ಬೌಲಿಂಗ್ ಮುಂದುವರಿಸಿದ್ದರು. ಗಾಯದ ನಡುವೆಯೂ ತಂಡಕ್ಕಾಗಿ ಆಟವಾಡಿದ ಉನ್ಮುಕ್ತ್ ಚಾಂದ್ ಗೆ ಟ್ವಿಟ್ಟರ್ ನಲ್ಲಿ ಪ್ರಶಂಸೆಗಳ ಸುರಿಮಳೆಯಾಗಿದೆ.

ಉತ್ತರ ಪ್ರದೇಶ ವಿರುದ್ಧದ ಪಂದ್ಯದಲ್ಲಿ ಉನ್ಮುಕ್ತ್ ಶತಕದ ನೆರವಿನಿಂದಾಗಿ ದೆಹಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಯ್ತು. ಅಂಡರ್ -19 ವಿಶ್ವಕಪ್ ನಲ್ಲಿ ಭಾರತವನ್ನು ಮುನ್ನಡೆಸಿದ್ದ ಉನ್ಮುಕ್ತ್, 2012ರಲ್ಲಿ ಗೆಲುವು ತಂದುಕೊಟ್ಟಿದ್ದರು.

ವಿಜಯ್ ಹಜಾರೆ ಟ್ರೋಫಿಯಲ್ಲಿ ಪಂದ್ಯ ಆರಂಭಕ್ಕೂ ಮುನ್ನ ನಡೆದ ಅಭ್ಯಾಸದ ವೇಳೆ ಉನ್ಮುಕ್ತ್ ಗಲ್ಲಕ್ಕೆ ಪೆಟ್ಟುಬಿದ್ದಿತ್ತು. ದವಡೆಗೆ ಬ್ಯಾಂಡೇಜ್ ಹಾಕಿಕೊಂಡು ಉನ್ಮುಕ್ತ್ ಬ್ಯಾಟಿಂಗ್ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...